ಬೆಳ್ತಂಗಡಿ: ಭಾರತ್ ಪೆಟ್ರೋಲ್ ಬಂಕ್ ಬಳಿ ಇರುವ ಗುರು ಸಾನಿಧ್ಯ ಕಟ್ಟಡದಲ್ಲಿ ತೆರಿಗೆ ಸಲಹೆಗಾರ ಯು. ಸಂದೇಶ್ ರಾವ್ ಅವರ ಸ್ಥಳಾಂತರಗೊಂಡ ಕಛೇರಿ ಶುಭಾರಂಭಗೊಂಡಿದೆ. ಯು. ಸಂದೇಶ್ ರಾವ್ ಅವರ ಕಛೇರಿ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ಇರುವ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ಕಳೆದ 9 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಗುರು ಸಾನಿಧ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಮಾ. 14ರಂದು ಲಕ್ಷ್ಮೀ ಪೂಜೆ ಸಹಿತ ಮಾಲಕ ಯು. ಸಂದೇಶ್ ರಾವ್ ಹಾಗೂ ಅರ್ಚನ ಅವರ ದೀಪೋಜ್ವಲನೆ ಮೂಲಕ ಕಾರ್ಯಾರಂಭಿಸಿದೆ.

ಗುರುದೇವ ಸೊಸೈಟಿಯ ಉಪಾಧಯಕ್ಷ ಭಗೀರಥ ಜಿ, ಪ್ರಖಾಶ್ ಎಲೆಕ್ಟ್ರಾನಿಕ್ಸ್ ಮಾಲಕ ಪುಷ್ಪರಾಜ್ ಶೆಟ್ಟಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಅಶೋಕ್ ಬಿ. ಪಿ. ಸಂದೇಶ್ ಅವರಿಗೆ ಶುಭ ಹಾರೈಸಿದರು.


ಮಾಲಕ ಸಂದೇಶ್ ರಾವ್ ಮಕ್ಕಳಾದ ಅದ್ವಿಕ್, ಸ್ವೀಕೃತ್, ತಾಯಿ ಪುಷ್ಪಲತಾ ಜಯರಾಮ ರಾವ್ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು. ರಿಜಿಸ್ಟ್ರೇಷನ್, ಜಿ. ಎಸ್. ಟಿ, ಆದಾಯ ತೆರಿಗೆ, ಕಂಪೆನಿ ಇನ್ ಕಾರ್ಪರೇಷನ್, ಲೋನ್, ಪ್ರಾಜೆಕ್ಟ್ ರಿಪೋರ್ಟ್ ಮುಂತಾದ ಸೇವೆಗಳು ದೊರೆಯುತ್ತವೆ.