
ಬೆಳ್ತಂಗಡಿ: ಕೆಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಬಿಷಪ್ ಅತೀ ವಂ ಧರ್ಮ ಗುರು ಪೀಟರ್ ಪೌಲ್ ಸಾಲ್ಡಾನ್ಹ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಗೆ ಮಾ. 8ರಂದು ಭೇಟಿ ನೀಡಿದರು. ಶಾಲಾ ವಾದ್ಯ ತಂಡದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯ ಮೂಲಕ ಭಗವಂತನ ಅನುಗ್ರಹವನ್ನು ಬೇಡಿದರು ಮತ್ತು ಸ್ವಾಗತ ನೃತ್ಯದ ಮೂಲಕ ಸರ್ವರನ್ನು ಸ್ವಾಗತಿಸಿದರು.
ಸಹಶಿಕ್ಷಕಿ ಪ್ರೀತಾ ಡಿಸೋಜ ಶಾಲಾ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಬಿಷಪ್ ರವರ ಕಿರು ಪರಿಚಯ ಮಾಡಿ ಸನ್ಮಾನಿಸಿದರು. ಶಾಲಾ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ರವರು ಬಿಷಪ್ ರವರ ಸರಳ ಜೀವನ, ಉದಾತ್ತ ವಿಚಾರಗಳು ಎಲ್ಲರಿಗೂ ಮಾದರಿ ಎಂದು ನುಡಿದರು. ಬಿಷಪ್ ರವರು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧನೆಗಳನ್ನು ಶ್ಲಾಘಿಸಿದರು. ಮಕ್ಕಳು ಸತ್ಯವನ್ನು ಮಾತನಾಡಿ, ಒಳ್ಳೆಯ ಕೆಲಸ ಮಾಡಿ ಮತ್ತು ಗೌರವ, ಜವಾಬ್ದಾರಿ, ಇಚ್ಚಾಶಕ್ತಿ ಹೊಂದಿ ಉತ್ತಮ ನಾಗರಿಕರಾಗಿ ಬಾಳಿ ಬಲಿಷ್ಠ ರಾಷ್ಟ್ರವನ್ನು ಕಟ್ಟುವ ನಾಯಕರಾಗಿ ಎಂದು ನುಡಿದು ಶುಭ ಹಾರೈಸಿದರು.
ವೇದಿಕೆಯಲ್ಲಿ ಬಿಷಪ್ ರವರ ಕಾರ್ಯದರ್ಶಿ ಫಾ. ತ್ರಿಶಾನ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಚರ್ಚ್ ನ 21 ಆಯೋಗಗಳ ಸಂಯೋಜಕಿ ಪೌಲಿನ್ ರೇಗೊ ಮತ್ತು ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಮೇಶ್ ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ಬ್ಲೆಂಡಿನ್ ರೊಡ್ರಿಗಸ್ ಸ್ವಾಗತಿಸಿ, ಮೇರಿ ಸುಜಾ ವಂದಿಸಿದರು. ರೆನಿಟಾ ಲಸ್ರಾದೋ ಕಾರ್ಯಕ್ರಮ ನಿರ್ವಹಿಸಿದರು.