ಕೊಕ್ಕಡ: ಎಂಡೋ ಸಂತೃಪ್ತರ ಪುನರ್‌ವಸತಿ ಕೇಂದ್ರದ ನೂತನ ಕಟ್ಟಡಕ್ಕೆ ಶಾಸಕರಿಂದ ಭೂಮಿ ಪೂಜೆ

0

ಕೊಕ್ಕಡ: ಗ್ರಾಮ ಪಂಚಾಯತ್ ಬಳಿಯ ಎಂಡೋ ಸಂತೃಪ್ತರ ಪುನರ್‌ವಸತಿ ಕೇಂದ್ರದ ರೂ.83ಲಕ್ಷದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡದ ಭೂಮಿ ಪೂಜೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾ.8ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ತಾಲೂಕು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಕೊಕ್ಕಡ ಗ್ರಾ.ಪಂ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ಮಾಜಿ ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ಪುರುಷೋತ್ತಮ, ಲತಾ, ಪ್ರಮೀಳಾ, ವಿಶ್ವನಾಥ, ಜಾನಕಿ, ಜಗದೀಶ್, ಕೊಕ್ಕಡ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಸಹಕಾರಿ ಸಂಘದ ನಿರ್ದೇಶಕರುಗಳಾದ ವಿಠಲ ಭಂಡಾರಿ, ಶ್ರೀನಾಥ್ ಬಡಕೈಲು, ರವಿಚಂದ್ರ ಪುಡೈತ್ತೂರು, ಕೊಕ್ಕಡ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಪ್ರಶಾಂತ್ ಪೂವಾಜೆ, ವಿಠಲ ಕುರ್ಲೆ, ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ನವೀನ್ ರೆಖ್ಯ, ಎಂಡೋ ಸಲ್ಫಾನ್‌ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ್ ಕೆಂಗುಡೇಲು, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ಡಾ| ಮೋಹನ್ ದಾಸ್ ಗೌಡ ಕೊಕ್ಕಡ, ಎಂಡೋಸಲ್ಫಾನ್ ಪೋಷಕರ ಸಮಿತಿ ಅಧ್ಯಕ್ಷೆ ರೇವತಿ ತಮ್ಬನಕರ್, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ಮನೋಜ್, ಉಮೇಶ್ ಅಲಂಗೂರು, ಗುತ್ತಿಗೆದಾರ ಕಾರ್ತಿಕ್ ಕೊಕ್ಕಡ ಉಪಸ್ಥಿತರಿದ್ದರು.

ಕೊಕ್ಕಡ ಗ್ರಾ.ಪಂ. ನಿಕಟಪೂರ್ವಧ್ಯಕ್ಷ ಯೋಗೀಶ್‌ ಆಲಂಬಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ವಿಠಲ್ ಕುರ್ಲೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here