ಬೆಳ್ತಂಗಡಿ: ನವೀನ ಹಾಗೂ ಉತ್ಕೃಷ್ಟ ಮಟ್ಟದ ಚಿನ್ನಾಭರಣವನ್ನು ಗ್ರಾಹಕರಿಗೆ ಕಳೆದ 80 ವರ್ಷಗಳಿಂದ ನೀಡುತ್ತಾ ಬಂದಿರುವ ಮುಳಿಯ ಜುವೆಲ್ಲರಿ ಇದೀಗ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟಿದೆ.
ವಜ್ರ ಖರೀದಿ ಮಾಡಬೇಕು ಅನ್ನುವವರಿಗೆ ಅತ್ಯದ್ಭುತ ಅವಕಾಶವನ್ನು ಕೊಟ್ಟಿದೆ. ಮಾರ್ಚ್ 3ರಿಂದ 31ರವರೆಗೆ ಬೆಳ್ತಂಗಡಿ ಸೇರಿದಂತೆ ಪುತ್ತೂರು, ಗೋಣಿಕಪ್ಪಲ್, ಮಡಿಕೇರಿ, ಬೆಂಗಳೂರಿನ ಶಾಖೆಗಳಲ್ಲಿ ಡೈಮಂಡ್ ಫೆಸ್ಟ್ ನಡೆಯುತ್ತಿದೆ.

ಬೆಳ್ತಂಗಡಿ ಮುಳಿಯ ಆಭರಣ ಮಳಿಗೆಯಲ್ಲಿ ವಜ್ರಾಭರಣಗಳ ಹಬ್ಬಕ್ಕೆ ಚಾಲನೆ ಕೊಟ್ಟ ಮುಂಡಾಜೆ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ., ಆಭರಣ ಖರೀದಿ ಅಂದರೆ ಮೊದಲ ಪ್ರಾಶಸ್ತ್ಯ ಮುಳಿಯ ಜುವೆಲ್ಲರಿಗೆ, ಇಲ್ಲಿನ ಸಿಬ್ಬಂದಿಗಳ ನಗುಮೊಗದ ಆತಿಥ್ಯ ಎಂತಹವರನ್ನೂ ಬರಸೆಳೆಯುತ್ತದೆ.
ಇಲ್ಲಿ ಚಿನ್ನ ಬೆಳ್ಳಿ ವಜ್ರ ಹೀಗೆ ಪ್ರತಿಯೊಂದರ ಅತ್ಯದ್ಭುತವಾದ ಸಂಗ್ರಹ ಇದೆ ಎಂದು ಮುಳಿಯ ಜ್ಯುವೆಲ್ಲರಿ ಕುರಿತಾದ ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದರು.
ಜೆಸಿಐ ಭಾರತ ವಲಯ 15ರ ಉಪಾಧ್ಯಕ್ಷ ರಂಜಿತ್ ಹೆಚ್.ಡಿ. ಮಾತನಾಡಿ, ಮುಳಿಯ ಜುವೆಲ್ಲರಿ ಕೇವಲ ವ್ಯವಹಾರಿಕವಾಗಿ ಮಾತ್ರ ಕಾರ್ಯ ನಿರ್ವಹಿಸದೆ ಸಾಮಾಜಿಕವಾಗಿಯೂ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಕಳೆದ 80 ವರ್ಷಗಳಿಂದ ಉತ್ತಮ ಗುಣಮಟ್ಟದ ಚಿನ್ನಭಾರಣ ಕೊಡುವ ಮುಳಿಯ ಜುವೆಲ್ಲರಿ ಮತ್ತಷ್ಟು ಶಾಖೆಯನ್ನು ಮಾಡಲಿ ಎಂದು ಶುಭ ಹಾರೈಸಿದರು. ಮಾರ್ಕೆಂಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ, ನಮ್ಮ ಆಪತ್ ಕಾಲಕ್ಕೆ ಸಹಾಯಕ್ಕೆ ಬರುವುದು ಒಡವೆ ಮಾತ್ರ, ಬೇರೆ ಯಾವ ಆಸ್ತಿಯೂ ಅಲ್ಲ, ಹೂಡಿಕೆ ವಿಷಯದಲ್ಲಿಯೂ ಚಿನ್ನವೇ ಉತ್ತಮ, ಡೈಮಂಡ್ ಫೆಸ್ಟ್ ಮೂಲಕ ಗ್ರಾಹಕರು ತಮ್ಮ ಮೊದಲ ವಜ್ರವನ್ನು ಮುಳಿಯದಲ್ಲಿ ಖರೀದಿ ಮಾಡಲಿ ಎಂದರು.
ಡೈಮಂಡ್ ಫೆಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಳಿಯ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಶಿವಮೂರ್ತಿ ಉಪಸ್ಥಿತರಿದ್ದರು. ಮುಳಿಯ ಶಾಖಾ ಪ್ರಬಂಧಕ ಲೋಹಿತ್ ಅತಿಥಿಗಳನ್ನು ಸ್ವಾಗತಿಸಿ, ಸಿಬ್ಬಂದಿ ಅಶ್ವಥ್ ಧನ್ಯವಾದ ಅರ್ಪಿಸಿದರು. ಕನ್ನಿಕಾ ನಿರೂಪಣೆ ಮಾಡಿದರು.