ನಾವೂರು: ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷೆ ಸುನಂದ ಅಧ್ಯಕ್ಷತೆಯಲ್ಲಿ ಮಾ. 3ರಂದು ದ.ಕ.ಜಿ.ಪ.ಹಿ.ಪ್ರಾ.ಶಾಲೆ ನಾವೂರಿನಲ್ಲಿ ಜರುಗಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರೀಯಾ ಅಗ್ನೇಸ್ ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.
ಮನೆಯಲ್ಲಿ ಉಪಯೋಗಿಸಿ ನಂತರ ಬೇಡವಾದ ವಸ್ತುಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾಕುವುದನ್ನು ಮೊದಲು ಗ್ರಾಮಸ್ಥರು ನಿಲ್ಲಿಸಬೇಕು, ನಾವೂರು ಗ್ರಾಮದ ಗ್ರಾಮಸ್ಥರೆ ಗ್ರಾಮದಲ್ಲಿ ಕಸ ಕಡ್ಡಿಗಳನ್ನು ಹಾಕುವುದು ಕಂಡುಬರುತ್ತದೆ. ಮೊದಲು ಇಂತಹ ಕೆಲಸವನ್ನು ನಿಲ್ಲಿಸಿ ನಂತರ ಮೂಲಭೂತ ಸೌಕರ್ಯಗಳನ್ನು ಕೇಳುವ, ನಮ್ಮ ಗ್ರಾಮವನ್ನು ನಾವು ಸ್ವಚ್ಛವಾಗಿ ಇಟ್ಟುಕೊಂಡರೆ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹರೀಶ್ ಸಾಲಿಯಾನ್ ತಿಳಿಸಿದರು.

ವಾರಕ್ಕೆ 2 ಬಾರಿ ಮಂಗಳವಾರ ಮತ್ತು ಶುಕ್ರವಾರ ಕಸದ ವಾಹನ ಗ್ರಾಮಕ್ಕೆ ಬರುತ್ತದೆ. ಒಣಕಸವನ್ನು ಸಂಗ್ರಹಿಸಿ ವಾಹನಕ್ಕೆ ಹಾಕಬೇಕು ಅದನ್ನು ಕರ್ಮಿನಡ್ಕಕ್ಕೆ ಕಳುಹಿಸಲಾಗುತ್ತದೆ. ಜನರಿಗೆ ಸರ್ಕಾರ ಯಾವುದೋ ಯಾವುದೋ ಉಚಿತ ಯೋಜನೆ ನೀಡುವ ಬದಲು, ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ನೀಡಲಿ ಇದರಿಂದ ಜನರಿಗೆ ಪ್ರಯೋಜನ ಆಗುತ್ತದೆ ಎಂದು ಗಣೇಶ್ ಗೌಡ ತಿಳಿಸಿದರು


ನಾವೂರು ಪಂಚಾಯತ್ ನಿಂದ ಶಾಲೆಗೆ ಒಳ್ಳೆಯ ಸಹಕಾರ, ಮೂಲಭೂತ ಸೌಕರ್ಯಕ್ಕೆ ಆದ್ಯತೆಯನ್ನು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

ಗ್ರಾಮದಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಆದಷ್ಟು ಬೇಗ ಸರಿಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಂಬಗಳ ಬದಲಾವಣೆ ಇದ್ದಾರೆ ಅದನ್ನು ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ ಎಂದರು. ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ. ಪಂ. ಉಪಾಧ್ಯಕ್ಷೆ ಮಮತಾ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ನಿರೂಪಿಸಿ, ಅನುಪಾಲನ ವರದಿಯನ್ನು ವಾಚಿಸಿದರು.