ಮುಳಿಕ್ಕಾರು: ಕಾನ ದೈವ ದೇವರ ಸಾನಿಧ್ಯಗಳು ಅತ್ಯಂತ ಪವಿತ್ರವಾಗಿದ್ದು, ಆದ್ಯಾತ್ಮ ದೃಷ್ಟಿಯಲ್ಲಿ ನೋಡಿದಾಗ ನನಗೆ ಈ ಪವಿತ್ರ ಜಾಗದಲ್ಲಿ ಒಂದು ಅದ್ಬುತವಾದ ಸಕಾರಾತ್ಮಕವಾದ ಶಕ್ತಿಯ ವೈಬ್ರೇಷನ್ ಆದ ಅನುಭವ ಉಂಟಾಗಿದೆ. ಎಂದು ಮಂಗಳೂರು ಎಂಪಿರಿಯಾ ಕಾರ್ಪೋರೇಶನ್ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ನಿಶಾನ್ ಕೃಷ್ಣ ಭಂಡಾರಿಯವರು ನುಡಿದರು.

ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಕಾನದಲ್ಲಿರುವ ಪುರಾತನ ಕಾಲದ ಅಜೀರ್ಣವಸ್ಥೆಯಲ್ಲಿರುವ ಉಳ್ಳಾಕ್ಳು, ಉಳ್ಳಾಲ್ತಿ, ಪಿಲಿ ಚಾಮುಂಡಿ, ಪಂಜುರ್ಲಿ ಹಾಗೂ ಪರಿವಾರ ದೈವ ದೇವರ ಸಾನಿಧ್ಯಕ್ಕೆ ಭೇಟಿ ನೀಡಿ ನಂತರ ಗ್ರಾಮಸ್ಥರ ಸಭೆಯಲ್ಲಿ ಮಾತಾಡಿದ ಅವರು ಕಾನ ದೈವ ದೇವರ ಸಾನಿಧ್ಯಗಳು, ಪ್ರವೇಶ ರಸ್ತೆ, ಮುಚ್ಚಿರುವ ಬಾವಿ ಎಲ್ಲವೂ ವಾಸ್ತು ಪ್ರಕಾರ ವಾಗಿದ್ದು ಈ ಪವಿತ್ರ ಜಾಗಕ್ಕೆ ಕಾಲಿಟ್ಟಾಗಲೇ ನನ್ನ ಶರೀರದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.
ಇಂತಹ ವಿಶೇಷ ಶಕ್ತಿ ಇರುವ ಪವಿತ್ರವಾದ ಜಾಗಕ್ಕೆ ಬರಲು ನನ್ನ ಸಹೋದರನಾದ ಸೋಮಂತಡ್ಕದ ನಂದೀಶ್ ಭಂಡಾರಿ ಮೂಲಕ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಭಾಗ್ಯವಾಗಿದೆ ಎಂದು ನುಡಿದ ಅವರು ಪುರಾತನ ಕಾಲದ ದೈವ ದೇವರ ಸಾನಿಧ್ಯಗಳ ಜೀರ್ಣೋದ್ದಾರ ಪ್ರಕ್ರಿಯೆ ಆರಂಭದಲ್ಲಿ ಅಲ್ಪ ಸ್ವಲ್ಪ ಅಡೆತಡೆ ಬಂದರೂ ದೈವ ದೇವರ ಅನುಗ್ರಹದಿಂದ ಎಲ್ಲಾ ಅಡೆತಡೆಗಳು ಕ್ರಮೇಣ ವಾಗಿ ಮಾಯವಾಗುತ್ತದೆ.

ಗ್ರಾಮಸ್ಥರು ಒಗ್ಗಟ್ಟಿನಲ್ಲಿ ದೈವ ದೇವರ ಸಾನಿಧ್ಯಗಳ ಜೀರ್ಣೋದ್ದಾರದ ಸೇವೆಯಲ್ಲಿ ತೋಡಗಿದಾಗ ದೈವ ದೇವರ ಅನುಗ್ರಹವೂ ಪ್ರಾಪ್ತಿಯಾಗುತ್ತದೆ. ಯಾವುದೇ ಊರಿನಲ್ಲಿ ಪುರಾತನ ಕಾಲದ ದೈವ ದೇವರ ಸಾನಿಧ್ಯ ಅಜೀರ್ಣವಸ್ಥೆಯಲ್ಲಿದ್ದರೆ ಆ ಊರು ಎಂದಿಗೂ ಅಭಿವೃದ್ಧಿ ಸಾಧ್ಯವಿಲ್ಲ. ಮೊದಲು ದೈವ ದೇವರ ಸಾನಿಧ್ಯಗಳನ್ನು ಜೀರ್ಣೋದ್ದಾರ ಮಾಡಿದಾಗ ನಮ್ಮ ಜೀವನವೂ ಕೂಡ ನೆಮ್ಮದಿಯಿಂದ ಇರಲು ಸಾಧ್ಯವಿದೆ.
ಸಾನಿಧ್ಯದ ದೈವ ದೇವರ ಅನುಗ್ರಹದಂತೆ ದೈವ ದೇವರ ಸಾನಿಧ್ಯಗಳ ಜೀರ್ಣೋದ್ದಾರ, ರಸ್ತೆ ನಿರ್ಮಾಣ, ಜಾಗದ ದಾಖಲೆ ತಯಾರಿ ಈ ಎಲ್ಲಾ ಮಹಾಕಾರ್ಯಗಳಿಗೆ ಮಂಗಳೂರು ಎಂಪಿರಿಯಾ ಕಾರ್ಪೋರೇಶನ್ ಸಂಸ್ಥೆ ವತಿಯಿಂದ ಸರ್ವ ರೀತಿಯ ಆರ್ಥಿಕ ನೆರವು ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.
ಸೋಮಂತಡ್ಕದ ದೈವಾರಾಧಕ ಹಾಗೂ ಸಮಾಜ ಸೇವಕರಾದ ನಂದೀಶ್ ಭಂಡಾರಿಯವರು ಮಾತನಾಡಿ ಕಾನ ಸಾನಿಧ್ಯದಲ್ಲಿ ವಿಶೇಷವಾಗಿ ಭಕ್ತರನ್ನು ತನ್ನತ್ರ ಸೆಳೆಯುವ ಅಪೂರ್ವ ವಾದ ದೈವಿಕ ಶಕ್ತಿ ಇದ್ದು ನಾನು ಒಮ್ಮೆ ಭೇಟಿ ನೀಡಿದ ಮೇಲೆ ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಗ್ರಾಮಸ್ಥರೆಲ್ಲರೂ ಶ್ರದ್ದಾ ಭಕ್ತಿ ಯಿಂದ ಸಾನಿಧ್ಯದ ದೈವ ದೇವರ ಸೇವೆಯಲ್ಲಿ ತೊಡಗಿ ದಾಗಲೇ ಗ್ರಾಮದ ಎಲ್ಲಾ ಸಮಸ್ಯೆಗಳು ಪರಿಹಾರವಾಗಲು ಹೊಸ ಮುನ್ನುಡಿಯಾಗಲಿದೆ.
ಸಾನಿಧ್ಯದ ಜೀರ್ಣೋದ್ದಾರಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ನುಡಿದರು. ಮಂಗಳೂರು ಎಂಪಿರಿಯ ಕಾರ್ಪೋರೇಶನ್ ಸಂಸ್ಥೆಯ ನಿರ್ದೇಶಕ ಕಿಶಾನ್ ಆಚಾರ್ಯ, ಗ್ರಾಮದ ಹಿರಿಯರಾದ ಗುಮ್ಮಣ್ಣ, ದೈವ ಪರಿಚಾರಕರಾದ ವೀರಪ್ಪ, ಹರೀಶ್ ಶಿಬರಾಜೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.