ನೆಲ್ಯಾಡಿ: ಶಾಂತಿ ಸಹ ಬಾಳ್ವೆ, ಪ್ರೀತಿ ಹಾಗೂ ಕ್ಷಮೆಯ ಹೊಸ ಪ್ರಪಂಚ ದರ್ಶನಕ್ಕೆ ಮುನ್ನುಡಿ ಬರೆದ ಪ್ರಭು ಯೇಸು ಕ್ರಿಸ್ತರ ಯಾತನೆ ಮರಣ ಮತ್ತು ಪುನಃರುತ್ತಾನ ನೆನಪಿಸುವ ವೃತಾಚರಣೆಯ ಕಾಲಕ್ಕೆ ಸೀರೋ ಮಲಬಾರ್ ಕ್ರೈಸ್ತರು ಪಾಪ ಪರಿಹಾರದ ಸಂಕೇತ ವಾಗಿ ಹಣೆಗೆ ವಿಭೂತಿ ಹಚ್ಚಿ ಪ್ರವೇಶಿಸಿದರು.
50 ದಿನಗಳವರೆಗೆ ಸಾತ್ವಿಕ ಆಹಾರ ಪದ್ಧತಿಯೊಂದಿಗೆ ಮಾಂಸ ಆಹಾರ ಪದ್ಧತಿ ಯನ್ನು ತ್ಯಜಿಸಿ ಸಸ್ಯಾಹಾರಿ ಗಳಾಗಿ, ಇನ್ನು ಕೆಲವರು ಉಪವಾಸ ಮತ್ತು ಪ್ರಾರ್ಥನೆ ಯೊಂದಿಗೆ ಆದ್ಯಾತ್ಮ ವಿಚಾರ ಗಳಿಗೆ ಹೆಚ್ಚು ಶ್ರದ್ದೆ ನೀಡಲಿದ್ದಾರೆ. ಆದಿತ್ಯವಾರ ಮತ್ತು ಶುಕ್ರವಾರಗಳಲ್ಲಿ ಶಿಲುಬೆಯ ಹಾದಿ ವ್ರತಾಚಾರಣೆ ಕಾಲದ ವಿಶೇಷ ಆಕರ್ಷಣೆ. ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಫಾ. ಶಾಜಿ ಮಾತ್ಯು ಹಾಗೂ ಫಾ. ಅರುಣ್ ಆರಳದಲ್ಲಿ ಫಾ ಅಲೆಕ್ಸ್ ಧಾರ್ಮಿಕ ವಿಧಿಗಳಿಗೆ ನೇತೃತ್ವ ನೀಡಿದರು.