ಶಿಶಿಲ: ಶ್ರೀ ಶಿಶಿಲೇಶ್ವರನ ಸನ್ನಿದಿಯಲ್ಲಿ ಶಿವರಾತ್ರಿ ಉತ್ಸವ ಅತ್ಯಂತ ವೈಭವದಿಂದ ಜರಗಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಅಶೀರ್ವಾದ ಪಡೆದರು. ದೇವರಿಗೆ ರೂ 1.50 ಲಕ್ಷ ವೆಚ್ಚದಲ್ಲಿ 7 ಬೆಳ್ಳಿಯ ಕಲಶವನ್ನು ಶಿಶಿಲ ದೇವಳದ ಆಡಳಿತ ಮಂಡಳಿಯಲ್ಲಿ ಸುಮಾರು 35 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀನಿವಾಸ ಮೂಡೆತ್ತಾಯ ಮತ್ತು ಮನೆಯವರು ಸಲ್ಲಿಸಿದರು.

ಬೆಳ್ಳಿಯ ಕಲಶ ಸಮರ್ಪಣೆಯನ್ನು ಶ್ರೀ ದೇವರಿಗೆ ತಂತ್ರಿಗಳಾದ ಶ್ರೀ ಕೆಮ್ಮಿಂಜೆ ನಾಗೆಶ ತಂತ್ರಿಗಳು ಸಮರ್ಪಿಸಿದರು. ಜಯರಾಮ ನೆಲ್ಲಿತ್ತಾಯ, ರಾಧಾಕೃಷ್ಣ ಭಟ್, ಆನಂದ ಪೂಜಾರಿ ಮೊದಲಾದವರು ಸಾವಿರಾರು ಭಕ್ತವೃಂದದವರು ಉಪಸ್ಥಿತರಿದ್ದರು.