ಅಹಲ್ಯಾಬಾಯಿ ಹೋಳ್ಕರ್ ಕುರಿತು ಉಪನ್ಯಾಸ

0

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ ಅಹಲ್ಯ ಬಾಯಿ ಹೋಳ್ಕರ್ – ಜೀವನಗಾಥೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಉಜಿರೆಯ ಶಾರದಾ ಮಂಟಪದಲ್ಲಿ ಜರುಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ಭವ್ಯಾ ಮಾತನಾಡಿ “ಪತಿಯ ಮರಣ ಮೃದಂಗದೊಡನೆ ಕಾರ್ಮೋಡ ಕವಿದರೂ, ತನ್ನವರ ಅಗಲುವಿಕೆಯ ಬಿಸಿಯ ಶಾಖವಿದ್ದರೂ, ವಿರಕ್ತಿಯ ಬೇಗೆಯಲ್ಲಿ ಬೆಂದು ನೊಂದು ಭಾವ ಬರಿದಾದರೂ ಎದೆಗುಂದದೆ ದಿಟ್ಟತನದಿಂದ ಸುಂಟರಗಾಳಿಯಂತೆ ರಾಜ್ಯೋದ್ಧಾರದ ಕಡೆಗೆ, ಪ್ರಜೆಗಳ ಹಿತ ದೃಷ್ಟಿಯಿಂದ ಎದ್ದು ನಿಂತವಳು ಅಹಲ್ಯಾ ಬಾಯಿ ಹೋಳ್ಕರ್.

ಜನರ ಒಳಿತಿಗಾಗಿ ಜನಜನಿತರಾದ ಅಹಲ್ಯಾಬಾಯಿ ಎಂಬ ಅರುಂಧತಿ ನಕ್ಷತ್ರ ಭಾರತೀಯ ಚರಿತೆಯ “ನಂದಾದೀಪ” ಎಂದರು. ಮಹಿಳಾ ಪ್ರಕಾರ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ಸ.ಪ ತಾಲೂಕು ಸಮಿತಿ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ, ವಿಭಾಗ ಸoಯೋಜಕ ಸುಂದರ ಶೆಟ್ಟಿ ಇಳಂತಿಲ, ಕಾರ್ಯಕಾರಿಣಿ ಸದಸ್ಯ ಗುರುನಾಥ್ ಪ್ರಭು, ಸಮಿತಿಯ ಸಹ ಕಾರ್ಯದರ್ಶಿ ಸಂತೋಷಿನಿ, ಘಟಕದ ಸಹಕಾರ್ಯದರ್ಶಿ ವನಜಾ ಜೋಷಿ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ಸಮಿತಿಯ ಕಾರ್ಯದರ್ಶಿ ಸುಭಾಷಿಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ವಿನುತಾ ರಜತ್ ಗೌಡ ಸ್ವಾಗತಿಸಿದರು. ತಾಲೂಕು ಸಮಿತಿಯ ಸಾಹಿತ್ಯ ಕೂಟ್ ಪ್ರಮುಖ್ ಅಶ್ವಿಜಾ ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here