ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಎಳ್ಕಜೆ ಗುತ್ತಿನ ಆಡಳಿತ ಮುಕ್ತೇಸರ ದಿನೇಶ್ ಅಮೀನ್ ಕುಂದಾಪುರ ರವರ ನೇತೃತ್ವದಲ್ಲಿ ಗುತ್ತಿನಲ್ಲಿ ಗೆಜ್ಜೆ ಗಿರಿಯ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಯಜಮಾಡಿಯ ಮಹೇಶ ಶಾಂತಿಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಮಾತನಾಡುತ್ತಾ ಪವಿತ್ರ ಪುಣ್ಯಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾ. 1ರಿಂದ 5ರ ತನಕ ಜರಗುವ ಜಾತ್ರೋತ್ಸವದೊಂದಿಗೆ ಮಾ. 2ರಂದು ಮಹಿಳೆಯರಿಗಾಗಿ ಮಡಿಲು ಸೇವೆಯ ವಿಶಿಷ್ಟ ಕಾರ್ಯಕ್ರಮ ಜರಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಬೆಳ್ತಂಗಡಿ ತಾಲೂಕಿನ ಮುಖ್ಯ ಸಂಚಾಲಕ ನಿತ್ಯಾನಂದ ನಾವರ ಸ್ವಾಗತಿಸಿ ಪ್ರಸ್ತಾವಿಸಿದರು. ರಕ್ಷಿತ್ ಶಿವರಾಮ್, ಜಯರಾಮ ಬಂಗೇರ, ದಿನೇಶ್ ಬೆಳಿಬೈಲು, ಮೋಹನ್ ಪೂಜಾರಿ, ಬಾಲಕೃಷ್ಣ ಪೂಜಾರಿ, ಸುನಿಲ್ ಪೂಜಾರಿ, ಡಾ. ಸುಧಾಮ್ಸ್, ಲೋಲಾಕ್ಷಿ ಶೇಖರ ಬಂಗೇರ, ಸಂಗೀತ ಪಿ. ಹೇರಾಜೆ, ರಜನಿ ಪೂಜಾರಿ, ಹರೀಶ್ ಪೂಜಾರಿ ಸೂಲಬೆಟ್ಟು, ಹಾಗೂ ನೂರಾರು ಭಕ್ತರು ಜೊತೆಗಿದ್ದರು.