ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾ.5 ರವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಬೆಳ್ತಂಗಡಿ ತಾಲೂಕಿನಿಂದ ಹೊರಡಲಿರುವ ಹಸಿರು ಹೊರೆ ಕಾಣಿಕೆಗೆ ಶಾಸಕ ಹರೀಶ್ ಪೂಂಜರವರು ಚಾಲನೆ ನೀಡಿದರು.

ಹೊರೆಕಾಣಿಕೆಯು ಗುರುವಾಯನಕೆರೆಯ ಬಂಟರಭವನದಿಂದ ಮೆರವಣಿಗೆಯ ಮೂಲಕ ಮಧ್ಯಾಹ್ನ 2 ಗಂಟೆಗೆ ಹೊರಟು ಕಾಪು ಮಾರಿಗುಡಿ ಅಮ್ಮನವರ ಸನ್ನಿಧಿಗೆ ತಲುಪಲಿದೆ. ಇದರ ಜೊತೆಗೆ ಬೆಳ್ತಂಗಡಿ ತಾಲೂಕಿನಿಂದ 100 ಕ್ವಿಂಟಾಲ್ ಅಕ್ಕಿ ಸನ್ನಿಧಾನಕ್ಕೆ ತಲುಪಲಿದ್ದು, ಬ್ರಹ್ಮಕಲಶೋತ್ಸವದ ಪುಣ್ಯಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳ್ತಂಗಡಿ ತಾಲೂಕಿನ ಜನರು ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ನ.ಪಂ. ಅಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಬಂಟರ ಸಂಘದ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಉದ್ಯಮಿ ಪುಷ್ಪರಾಜ್ ಶೆಟ್ಟಿ, ಉದ್ಯಮಿ ವಸಂತ ಶೆಟ್ಟಿ, ಕಾಪು ಮಾರಿಗುಡಿ ನವ ಲೇಖನ ಯಜ್ಞ ಇದರ ಬೆಳ್ತಂಗಡಿ ಸಮಿತಿಯ ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ, ವಿಜಯ ಕ್ರೆಡಿಟ್ ಬ್ಯಾಂಕ್ ಸೊಸೈಟಿ ಅಧ್ಯಕ್ಷ ಅಜಿತ್ ಶೆಟ್ಟಿ ಕೊರಿಯರು, ದಿನೇಶ್ ಗೌಡ ಉದ್ಯಮಿ, ಸುಕ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಿಲ್ಲಾ ಸಹ ಕಾರ್ಯವಾಹ ಸಂತೋಷ್ ಸಾಲಿಯಾನ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮೀ ಎನ್. ಸಾಮಾನಿ, ಕೋಶಾಧಿಕಾರಿ ರಕ್ಷಿತ ಶೆಟ್ಟಿ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕಿ ಅಶ್ವಿನಿ ಹೆಬ್ಬಾರ್, ಯುವ ಬಂಟರ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ, ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ರಾಷ್ಟ್ರೀಯ ಸೇವಾ ಯೋಜನೆ ಎಸ್.ಡಿ.ಎಮ್. ಉಜಿರೆಯ ಸ್ವಯಂಸೇವಕರು, ಊರಿನ ಹಿರಿಯರು, ಗೌರವಾನ್ವಿತರು ಹಾಗೂ ನಾಗರಿಕರು ಉಪಸಿತರಿದ್ದರು.ವಾಣಿ ಕಾಲೇಜು ಉಪನ್ಯಾಸಕ ಶಂಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.