ಬೆಳ್ತಂಗಡಿ: ತಾಲೂಕು ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ಇರುವ ತಾಲೂಕಿನ ಕಟ್ಟ ಕಡೆಯ ಗ್ರಾಮವಾದ ಶಿಬಾಜೆಗೆ ತಾಲೂಕು ಕೇಂದ್ರದಿಂದ ಯಾವುದೇ ಸರಕಾರಿ ಬಸ್ ಸೌಲಭ್ಯವಿಲ್ಲದೆ ವಂಚಿತವಾಗಿದ್ದು, ಇದರಿಂದ ದಿನ ನಿತ್ಯ ಕೆಲಸಕ್ಕೆ, ಕಛೇರಿ ಕೆಲಸಕ್ಕೆ ಓಡಾಡುವವವರು ತಮ್ಮ ಸ್ವಂತ ವಾಹನ ಅಥವಾ ಕೊಕ್ಕಡಕ್ಕೆ ಬಂದು ಅಲ್ಲಿಂದ ಧರ್ಮಸ್ಥಳಕ್ಕೆ ಬಂದು ಬೆಳ್ತಂಗಡಿ ತಲುಪಬೇಕಾಗಿದ್ದು ಬೆಳಿಗ್ಗೆ ಹೊರಟರೆ ಬೆಳ್ತಂಗಡಿಗೆ ತಲುಪುವಾಗ ಮದ್ಯಾಹ್ನ ಅಲ್ಲಿ ಕೆಲಸ ಮುಗಿಸಿ ಮತ್ತೆ ಮನೆಗೆ ಹೊರಡುವಾಗ ಸಾಯಂಕಾಲ ಮನೆ ತಲುಪುವುದು ರಾತ್ರಿ ಆಗುತ್ತದೆ.
ಶಿಬಾಜೆ ಗ್ರಾಮಕ್ಕೆoದೆ ಸರಕಾರಿ ಬಸ್ ವ್ಯವಸ್ಥೆ ಆರಂಭವಾದರೆ ಶಿಬಾಜೆ, ಶಿಶಿಲ, ಅರಸಿನಮಕ್ಕಿ ಕೊಕ್ಕಡ ಬರುವವರಿಗೆ ಅನುಕೂಲವಾಗುವುದು ಅಥವಾ ಇದೆ ಬಸ್ ಬೆಳ್ತಂಗಡಿಯಿಂದ ಕುದ್ರಾಯ ಮಾರ್ಗವಾಗಿ ನಿಡ್ಲೆ ಕಾಯರ್ತಡ್ಕ, ಕಳೆಂಜ, ಶಿಬರಾಜೆ ಮಾರ್ಗವಾಗಿ ಅರಸಿನಮಕ್ಕಿಗೆ ಬಂದು ಶಿಬಾಜೆಗೆ ಬಂದರು ಜನರಿಗೆ ಉಪಯೋಗವಾಗುತ್ತದೆ.
ಗ್ರಾಮಸ್ಥರು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿಯಿಂದ ಹೊರಟು 11.30ಗೆ ಶಿಬಾಜೆಗೆ ತಲುಪಿ ಅಲ್ಲಿಂದ ಮತ್ತೆ ಬೆಳ್ತಂಗಡಿ ಮತ್ತು ಸಾಯಂಕಾಲ ಶಾಲಾ ಮಕ್ಕಳು ಹೊರಡುವ ಸಮಯದಲ್ಲಿ ಬೆಳ್ತಂಗಡಿಯಿಂದ ಶಿಬಾಜೆಗೆ ಬಂದು ಹಾಲ್ಟ್ ಮಾಡಿ ಬೆಳಿಗ್ಗೆ 7ರಿಂದ 8ಗಂಟೆ ನಡುವೆ ಮತ್ತೆ ಬೆಳ್ತಂಗಡಿಗೆ ಪ್ರಯಾಣ ಮಾಡುವಂತಾದರೆ ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದಾರೆ.
ಗ್ರಾಮದ ಮೊಂಟೆತ್ತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಧರ್ ರಾವ್, ಸಮಿತಿ ಸದಸ್ಯರಾದ ಸುಂದರ ಮಲೆಕುಡಿಯ, ಗಂಗಾಧರ ಗೌಡ, ವಸಂತ ಗೌಡ ಕಲ್ಲಾಜೆ ರಕ್ಷಿತ್ ಶಿವರಾಮ್ ಬಳಿ ಭೇಟಿ ನೀಡಿ ಮನವಿ ಸಲ್ಲಿಸಿದ್ದು ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಪೂರ್ಣವಾಗಿ ಸಹಕರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.