ಉಜಿರೆ ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ

0

ಉಜಿರೆ: ಯುವವಾಹಿನಿ ಸಂಚಲನ ಸಮಿತಿ ಇದರ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರಿಗೆ ಓವರ್ ಆರ್ಮ್ ಲೀಗ್ ಮಾದರಿಯ 8 ತಂಡಗಳ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ ಗುರುನಾರಾಯಣ ಟ್ರೋಫಿ 2025 ಫೆ. 22ರಂದು ಉಜಿರೆ ಅಜ್ಜರ ಕಲ್ಲು ಮೈದಾನದಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಜಿರೆ ಶ್ರೀ ಗುರುನಾರಾಯಣ ಸ್ವಾಮಿಸೇವಾ ಸಂಘದ ಮಾಜಿ ಅಧ್ಯಕ್ಷ ಎಂ. ಬಿ. ಜಯಶಂಕರ್ ಉದ್ಘಾಟಿಸಿ, ಮಾತನಾಡಿ ಬಿಲ್ಲವ ಭಾಂದವರಿಗಾಗಿ ಆಯೋಜಿಸಲಾದ ಈ ಕ್ರೀಡಾಕೂಟ ಯಶಸ್ವಿಯಾಗಲಿ. 40 ವರ್ಷದ ಹಿಂದೆ ನಾನು ಒಬ್ಬ ಕ್ರಿಕೆಟ್ ಆಟಗಾರನಾಗಿದ್ದೆ. ಅದೇ ಉಮ್ಮಸಿನಿಂದ ಈ ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇನೆ ಎಂದರು.

ಮುಖ್ಯ ಅತಿಥಿಗಳಾಗಿ ಉಜಿರೆ ಗುರು ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಮಾಜಿ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ನಿವೃತ್ತ ಕೃಷಿ ಅಧಿಕಾರಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ಬೆಳಾಲು, ಉಜಿರೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಬರೆಮೇಲು, ಧರ್ಮಸ್ಥಳದ ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ, ಧರ್ಮಸ್ಥಳ ಇಂಚರ ಮೊಬೈಲ್ ಸಚಿನ್, ಸುದ್ದಿ ಬಿಡುಗಡೆಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು, ಉಜಿರೆ ಯುವವಾಹಿನಿ ಅಧ್ಯಕ್ಷ ರಿತೇಶ್ ರೆಂಜಾಳ, ಕಡಿರುದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಶೋಕ್, ಉಜಿರೆ ರತ್ನಮಾನಸದ ರವಿಚಂದ್ರ, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಗುರುಪ್ರಸಾದ್ ಕೋಟ್ಯಾನ್, ಬೆಂಗಳೂರು ವಿವಾ ಟೊಯೋಟಾ ಸಂಸ್ಥೆಯ ಸರ್ವಿಸ್ ಮೆನೇಜರ್ ಗಣೇಶ್, 8 ತಂಡಗಳ ಮಾಲಾಕರಾದ ಡಿ ಜೆ ಬ್ರದರ್ಸ್ ಪುಡುವೆಟ್ಟು ರಂಜನ್ ಬಿರ್ವ, ಮಹೇಶ್, ಕನ್ಯಾಡಿ ಫ್ರೆಂಡ್ಸ್ ನವೀನ್ ಸುವರ್ಣ, ಅಯ್ಯನ್ ಪೂಜಾರಿ ಕಾಶಿಪಟ್ಣ, ಪ್ರದೀಪ್ ಕಾಶಿಪಟ್ಣ, ಅರ್ವಿ ದೇಸಿನಕೋಡಿ, ರವಿ ದೇಸಿನ ಕೋಡಿ, ಚಾಮುಂಡೇಶ್ವರಿ ಆರಿಕೋಡಿ ದಯಾನಂದ ಪಿ. ಬೆಳಾಲು, ಡಾ. ಚೇತನ್, ಫೆಂಟೆಂನ್ಸಿ ಕ್ರಿಕೆಟರ್ಸ್ ಅನಿಲ್, ಪೆರ್ಲ ಕಿಶೋರ್, ಫ್ರೆಂಡ್ಸ್ ಮೈರೋಳ್ತಡ್ಕ ರಾಜೇಶ್, ನವೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಕ್ರೀಡಾ ಸಂಚಾಲಕ ದೇವಿ ಪ್ರಸಾದ್ ಬರೆಮೇಲು, ಕಾರ್ಯದರ್ಶಿ ಉದಯ ಮಾಚಾರು, ಸಮಿತಿ ಸದಸ್ಯರು ಹಾಜರಿದ್ದು ಸಹಕರಿಸಿದರು. ಬಳಿಕ ಕ್ರಿಕೆಟ್ ಪಂದ್ಯಾಟ ನಡೆಯಿತು. ಪ್ರಸಾದ್ ಕಾಶಿಪಟ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here