ಗುರುವಾಯನಕೆರೆ: ಕರ್ನಾಟಕ ಮುಸ್ಲಿಮ್ ಜಮಾಅತ್ ( ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್ ನ 2025- 26ನೇ ಸಾಲಿನ ಮುಂದಿನ ಮೂರು ವರ್ಷದ ಅವಧಿಗೆ ಹೊಸ ಸಮಿತಿಯನ್ನು ಮದ್ದಡ್ಕ ಸುನ್ನೀ ಸೆಂಟರ್ ಸಭಾಂಗಣದಲ್ಲಿ ಅಬ್ದುಲ್ ಹಮೀದ್ ಅಲ್ ಫುರ್ಖಾನಿರವರ ಅಧ್ಯಕ್ಷತೆಯಲ್ಲಿ ವೀಕ್ಷಕರಾದ ಇಬ್ರಾಹಿಂ ಕಕ್ಕಿಂಜೆ ನಡೆಸಿಕೊಟ್ಟರು.
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅಲ್ ಫುರ್ಖಾನಿ, ಪ್ರದಾನ ಕಾರ್ಯದರ್ಶಿಯಾಗಿ ಉಮ್ಮರ್ ಮಾಸ್ಟರ್, ಕೋಶಾಧಿಕಾರಿಯಾಗಿ ಅಬ್ಬೋನು ಮದ್ದಡ್ಕ, ಉಪಾದ್ಯಕ್ಷರಾಗಿ ಉಸ್ಮಾನ್ ಹಾಜಿ ಆಲಂದಿಲ ದಅವಾ, ಕಾರ್ಯದರ್ಶಿಯಾಗಿ ಉಸ್ಮಾನ್ ಸಖಾಫಿ ಮೀಡಿಯಾ, ಕಾರ್ಯದರ್ಶಿಯಾಗಿ ಅಬ್ದುಲ್ ಕರೀಮ್ ಗೇರುಕಟ್ಟೆ, ಹಿಸಾಬ ಕಾರ್ಯದರ್ಶಿಯಾಗಿ ಅಬೂಸ್ಟಾಲಿಹ್ ಪರಪ್ಪು ಚಾರಿಟಿ (ಸಹಾಯ) ಹಂಝ ಜಾರಿಗೆಬೈಲು, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಬೂಬಕ್ಕರ್ ಹಾಜಿ ಪರಪ್ಪು, ಸಂಘಟನಾ ಕಾರ್ಯದರ್ಶಿಯಾಗಿ ಮಹಮ್ಮದ್ ರಫೀಕ್ ಅಲ್ ಫುರ್ಖಾನಿ ಜಾರಿಗೆಬೈಲು ಹಾಗೂ ಒಟ್ಟು 30 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು.
ಸರ್ಕಲ್ ಕೌನ್ಸಿಲರ್ ಗಳಾಗಿ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಇಸ್ಮಾಯಿಲ್ ಹಾಜಿ ಜಾರಿಗೆಬೈಲು, ಎಮ್.ಎಚ್ ಅಬೂಬಕ್ಕರ್ ಮದ್ದಡ್ಕ, ಹಂಝ ಜಾರಿಗೆಬೈಲು, ಅಬೂಸ್ಟಾಲಿಹ್ ಪರಪ್ಪು, ಉಸ್ಮಾನ್ ಸಖಾಫಿ ಆಯ್ಕೆಯಾದರು.