ಅ.ಭಾ.ಸಾ.ಪ ದ.ಕ.ಜಿಲ್ಲಾಧ್ಯಕ್ಷರಾಗಿಪಿ.ಬಿ.ಹರೀಶ್ ರೈ ಆಯ್ಕೆ

0

ಬೆಳ್ತಂಗಡಿ: ಭಾರತದ ಎಲ್ಲ ಭಾಷೆಗಳ ಸಾಹಿತ್ಯ ಕ್ಷೇತ್ರದ ರಾಷ್ಟ್ರೀಯ ಸಂಘಟನೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ದ.ಕ.ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಪಿ.ಬಿ.ಹರೀಶ್ ರೈ ಪುನರಾಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಡಾ. ಎಂ.ಮೋಹನ ಆಳ್ವ, ಕಾರ್ಯದರ್ಶಿಯಾಗಿ ಸುಮಂಗಲ ರತ್ನಾಕರ ರಾವ್, ಉಪಾಧ್ಯಕ್ಷೆಯಾಗಿ ವೀಣಾ ಟಿ. ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ಲತೇಶ್ ಬಾಕ್ರಬೈಲ್, ಶ್ರೀಲಕ್ಷ್ಮಿ ಮಠದಮೂಲೆ, ಖಜಾಂಜಿಯಾಗಿ ಭಾಸ್ಕರ ರೈ ಕಟ್ಟ ಹಾಗೂ ಚಂದ್ರಶೇಖರ ಕುಳಮರ್ವ (ಮಾಧ್ಯಮ ಪ್ರಮುಖ), ಪ್ರಕಾಶ ನಾರಾಯಣ ಚಾರ್ಮಾಡಿ ( ಸಂಪರ್ಕ ಪ್ರಮುಖ), ಗೀತಾ ಲಕ್ಷ್ಮೀಶ( ಸಾಹಿತ್ಯ ಕೂಟ ಪ್ರಮುಖ),
ರಮೇಶ ಮಯ್ಯ, ಡಾ. ಸುರೇಶ ನೆಗಳಗುಳಿ, ರವೀಂದ್ರ ಶೆಟ್ಟಿ ಬಳೆಂಜ ( ಸಮಿತಿ ಸದಸ್ಯರು ) ಆಯ್ಕೆಯಾಗಿದ್ದಾರೆ.

ಪಿ.ಬಿ.ಹರೀಶ್ ರೈ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದವರಾಗಿದ್ದು, ಮಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿದ್ದಾರೆ.

LEAVE A REPLY

Please enter your comment!
Please enter your name here