ಮಡಂತ್ಯಾರು: ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಫೆ. 26ರವರೆಗೆ ವಿಸ್ತರಣೆ. ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರ್, ಗ್ರಾಮ ಪಂಚಾಯತ್ ಮಡಂತ್ಯಾರ್, ರೋಟರಿ ಕ್ಲಬ್ ಮಡಂತ್ಯಾರ್, ಜೆ.ಸಿ.ಐ ಮಡಂತ್ಯಾರ್ ಮತ್ತು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್, ಪುತ್ತೂರು ಇದರ ಸಹಯೋಗದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಫೆ. 9ರಿಂದ ಫೆ. 23ರವರೆಗೆ ನಡೆಯಲಿದ್ದು ಬಹು ಜನರ ಅಪೇಕ್ಷೆ ಮೇರೆಗೆ 3ದಿನ ಗಳ ಕಾಲ ಫೆ. 26ರವರೆಗೆ ವಿಸ್ತರಿಸಿದೆ.

ಸೆಕ್ರೆಡ್ ಹಾರ್ಟ್ ಚರ್ಚಿನ ಸಭಾ ಭವನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಡೆದ ಉಚಿತ ಥೆರಪಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿದೆ.

ಇದರ ಪ್ರವರ್ತಕ ರತ್ನಾಕರ ಶೆಟ್ಟಿ ಥೆರಪಿ ಬಗ್ಗೆ ಮಾಹಿತಿ ನೀಡಿದರು.