

ಬೆಳ್ತಂಗಡಿ: ಖಾಸಗಿ ಬಸ್ ನೌಕರರ ಸಂಘ ಜಿಲ್ಲಾ ಘಟಕದ ಉದ್ಘಾಟನೆಯ ಕಾರ್ಯಕ್ರಮ ಫೆ. 18ರಂದು 7:00ಗೆ ಉಪ್ಪಿನಂಗಡಿಯ ಹೆಚ್. ಎಂ. ಹಾಲ್ ಸಭಾಂಗಣದಲ್ಲಿ ನಡೆಯಿತು.. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಖಾಸಗಿ ಬಸ್ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಕೆಂಪಿ ವಹಿಸಿದ್ದರು.
ಖಾಸಗಿ ಬಸ್ ನೌಕರರ ಸಂಘದ ಕಳೆದ ಐದಾರು ವರ್ಷಗಳಿಂದ ನಡೆದು ಬಂದ ದಾರಿಯನ್ನು ಖಾಸಗಿ ಬಸ್ ನೌಕರ ಸಂಘದ ಗೌರವ ಸಲಹೆಗಾರದ ಚಿದಾನಂದ ಸಾಲ್ಯಾನ್ ಇವರು ಪ್ರಾಸ್ತವಿಕ ನುಡಿಗಳೊಂದಿಗೆ ಮಾತನಾಡಿದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖಾಸಗಿ ಬಸ್ ನೌಕರರ ಸಂಘದ ಕಾನೂನು ಸಲಹೆಗಾರರಾದ ಪ್ರಶಾಂತ್ ಎಂ. ಇದೇ ಪ್ರಥಮ ಬಾರಿಗೆ ಖಾಸಗಿ ಬಸ್ ನೌಕರರ ಸಂಘ ನಮ್ಮ ತಾಲೂಕಿನಲ್ಲಿ ಆದದ್ದು ಬಹಳ ಸಂತೋಷಕವಾದ ವಿಷಯ ಎಂದು ತಿಳಿಸಿ ಇನ್ನು ಮುಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಲ್ಲಾ ನೌಕರರ ಸಂಘವನ್ನು ಸೇರಿಸಿ ಸಾರ್ವಜನಿಕರಿಗೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಮತ್ತು ಕೊಡುಗೆಗಳನ್ನು ನೀಡಿ ಎಂದು ಶುಭ ಹಾರೈಸಿದರು .
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ದುಬೈಲ ಅಗನಾಡಿ, ಖಾಸಗಿ ಬಸ್ ನೌಕರರ ಶಿಸ್ತು ನಿಯಮಗಳನ್ನು ತಿಳಿಸಿದರು. ಖಾಸಗಿ ಬಸ್ ನೌಕರರ ಸಂಘದ ಕಾನೂನು ಸಲಹೆಗಾರ ಪ್ರಸಾದ್ ಕುಮಾರ್ ಪುತ್ತೂರು, ಖಾಸಗಿ ಬಸ್ ನೌಕರರ ಸಂಘದ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ ಬೆಳ್ತಂಗಡಿ, ನಾರಾಯಣ ಉಪ್ಪಿನಂಗಡಿ, ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸತತ ಐದಾರು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿರುವಂತಹ ಸಿದ್ದಿ ಕೆಂಪಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅದೇ ರೀತಿ ಖಾಸಗಿ ಬಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರದ ದೀಪಕ್ ಜಿ. ಬೆಳ್ತಂಗಡಿಯವರನ್ನು ಕೂಡ ಖಾಸಗಿ ಬಸ್ ನೌಕರರ ಸಂಘ ವತಿಯಿಂದ ಸನ್ಮಾನಿಸಲಾಯಿತು.
ಖಾಸಗಿ ಬಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ದೀಪಕ್ ಜಿ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ಖಾಸಗಿ ಬಸ್ ನೌಕರರ ಸಂಘದ ಕೋಶಾಧಿಕಾರಿಯಾಗಿ ಇಲಿಯಾಸ್ ಸ್ವಾಗತ ಮತ್ತು ಧನ್ಯವಾದಗಳು ಅಂದಿಗೆ ಕಾರ್ಯಕ್ರಮವನ್ನು ಮುಕ್ಯಗೊಳಿಸಿದರು.