ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಳ್ತಂಗಡಿಯ 8ನೇ ವರ್ಷದ ಕ್ರೀಡೋತ್ಸವ: ಸಾಧಕ ಸಂಘಟನೆಗಳಿಗೆ ಗೌರವಾರ್ಪಣೆ – ಸಾಂಸ್ಕೃತಿಕ ಕಾರ್ಯಕ್ರಮ

0

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯ ಧ್ಯೇಯದೊಂದಿಗೆ ಸಮಾಜಮುಖಿಯಾಗಿ ಕಾರ್ಯಾಚರಿಸುತ್ತಿರುವ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಳ್ತಂಗಡಿ ಇದರ 8ನೇ ವರ್ಷದ ಕಾರ್ಯಕ್ರಮ ಜ. 25 ಮತ್ತು 26ರಂದು ಅಳದಂಗಡಿಯ ಸತ್ಯದೇವತಾ ಮೈದಾನ ಪೈಕಾ ಕ್ರೀಡಾಂಗಣ ಹಾಗೂ ಬಡಗಕಾರಂದೂರು ಶಾಲಾ ವಠಾರದಲ್ಲಿ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರು ದೀಪ ಪ್ರಜ್ವಲಿಸಿ ಉಧ್ಘಾಟಿಸಿದರು. ಕೈಗಾರಿಕೋದ್ಯಮಿ, ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷರಾಗಿ ಸೇವೆಗೈದಿದ್ದ ದೇವೇಂದ್ರ ಹೆಗ್ಡೆ ಕೊಕ್ರಾಡಿ ರವರು ಎಂಟನೇ ಆವೃತ್ತಿಯ ಸಮವಸ್ತ್ರ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಬೆಳ್ತಂಗಡಿ ತಾಲೂಕು ಮಟ್ಟದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಬೆಳ್ತಂಗಡಿ ತಾಲೂಕು ಮಟ್ಟದ ಮಹಿಳೆಯರ ಹಾಗೂ ಪುರುಷರ ಖೋಖೋ ಪಂದ್ಯಾವಳಿ ಜರುಗಿದವು. ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ,ಸಾಯಿರಾಂ ಫ್ರೆಂಡ್ಸ್ ಗುರುವಾಯನಕೆರೆ, ಶ್ರೀ ಸೋಮನಾಥೇಶ್ವರಿ ಕುಣಿತ ಭಜನಾ ಮಂಡಳಿ ಅಳದಂಗಡಿ, ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಗಳ ಸಹಿತ ಟೀಂ ಅಭಯಹಸ್ತ ಸಂಘಟನೆಯಲ್ಲಿ ಸುದೀರ್ಘ ಅವಧಿಯ ಸೇವೆಗೈದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಲಾಸರಸ್ವತಿ ನೃತ್ಯ ಅಕಾಡೆಮಿಯ ಕಲಾವಿದರಿಂದ ಹಾಗೂ ತೃಪ್ತಿ ಬಳಗದ ಯಕ್ಷಗಾನ ನಾಟ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲ್ಲಡ್ಕ ವಿಠ್ಠಲ ನಾಯಕ್ ತಂಡದವರ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ನ, ಉದ್ಯಮಿ ಕಾಂಗ್ರೆಸ್ ಮುಖಂಡ ಮೋಹನ್ ಗೌಡ ಕಲ್ಮಂಜ, ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಸಂಯೋಜಕ ಫಾರೂಕ್ ಉಳ್ಳಾಲ್, ಭಾಜಪಾ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಂಡಲ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸದಸ್ಯ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ಯುವ ಕಾಂಗ್ರೆಸ್ ಮುಖಂಡರಾದ ಅಭಿನಂದನ್ ಹರೀಶ್, ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ವಂದನಾ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಸಂತಿ ಸಿ. ಪೂಜಾರಿ, ಬಳಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಅಳದಂಗಡಿ ವರ್ತಕರ ಸಂಘದ ಅಧ್ಯಕ್ಷ ರಾಜು ಪೂಜಾರಿ, ಕಾಂಗ್ರೆಸ್ ಮುಖಂಡ ಲಿಯೋ ಪಿರೇರಾ ಪಿಲ್ಯ, ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಭಾಕರ ಕೊಡಂಗೆ, ಸುನಿಲ್ ಕುಮಾರ್ ಜೈನ್, ಅಬ್ದುಲ್ ಕರೀಂ ಗೇರುಕಟ್ಟೆ, ಶೇಖರ್ ಲಾಯಿಲ, ವಿರೇಂದ್ರ ಕುಮಾರ್ ಜೈನ್ ಬಿ. ಕೆ ವಸಂತ್, ಮಾನವ ಬಂಧುತ್ವ ವೇದಿಕೆಯ ಚೆನ್ನಕೇಶವ, ಹರೀಶ್ ವೈ ಚಂದ್ರಮ, ಪ್ರದೀಪ್ ಶೆಟ್ಟಿ ಕುವೆಟ್ಟು, ದೇವದಾಸ್ ಸಾಲಿಯಾನ್ ಆಲಡ್ಕ, ಅಳದಂಗಡಿ ಕಾಳಿಕಾಂಬಾ ಜ್ಯುವೆಲ್ಲರಿ ಮಾಲಕರಾದ ಸದಾನಂದ ಆಚಾರ್ಯ, ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಉಪಾಧ್ಯಕ್ಷ ಜನಾರ್ದನ ಪೂಜಾರಿ ಕೊಡಂಗೆ, ಕ್ರೀಡಾಪೋಷಕ ಹಫೀಸ್ ಪಿಲ್ಯ, ಬಡಗಕಾರಂದೂರು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಶಶಿಕಾಂತ್ ನಾಯಕ್, ಉಪಾಧ್ಯಕ್ಷೆ ರೂಪಾ ಎಂ., ಸದಸ್ಯರಾದ ಪ್ರಭಾಕರ ನಾಯ್ಕ್, ಆನಂದ ಪೂಜಾರಿ, ಸದಾಶಿವ ಬಜಿರೆ ಪ್ರಮುಖರಾದ ಚಿದಾನಂದ ಪೂಜಾರಿ ಎಲ್ದಕ್ಕ, ಎಸ್. ಡಿ. ಪಿ. ಐ ಮುಖಂಡರಾದ ನವಾಜ್ ಷರೀಫ್ ಕಟ್ಟೆ, ಸುರೇಂದ್ರ ಜೈನ್ ಬಲ್ಯಾಯಕೋಡಿ, ಮನೋಹರ ಸಾಲಿಯಾನ್ ಕೆದ್ದು, ಕಾಸಿಂ ಕಟ್ಟೆ, ಪ್ರವೀಣ್ ಪೂಜಾರಿ ಲಾಂತ್ಯಾರು, ಆನಂದ ಪೂಜಾರಿ ಪಿಲ್ಯ, ಸಂಶುದ್ದೀನ್ ಕಟ್ಟೆ, ಸಂತೋಷ್ ಪೂಜಾರಿ ನಿನ್ನಿಕಲ್ಲು, ಮಾಲಾ, ಶ್ರೀನಿವಾಸ್ ರಾವ್ ದೋರಿಂಜ, ನಿತ್ಯಾನಂದ ಶೆಟ್ಟಿ ನೊಚ್ಚ, ಕುಶಾಲಪ್ಪ ಗೌಡ ಶಿರ್ಲಾಲು, ಹರೀಶ್ ಕುಲಾಲ್ ಕೆದ್ದು, ದಿನೇಶ್ ಪಿ.ಕೆ. ಬಳಂಜ, ಪ್ರಭಾಕರ ಶೆಟ್ಟಿ ‘ದೀಪಾ’, ಸುಂದರ ಪೂಜಾರಿ ನೀರಲ್ಕೆ, ಶ್ರೀರಂಗ ಮಯ್ಯ, ರಘು ದೇವಾಡಿಗ, ಪ್ರೇಮಾವತಿ ಅಶೋಕ್ ರಾವ್, ಅಳದಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್, ಕೃಷ್ಣಪ್ಪ ಪೂಜಾರಿ ಬಿಕ್ಕಿರ, ಪ್ರವೀಣ್ ಬರಾಯ, ಹರೀಶ್ ಆಚಾರ್ಯ ಮಿತ್ತರೋಡಿ, ಗೀತಾ ಮಡಿವಾಳ, ಶಿಕ್ಷಕರಾದ ನಾಗಭೂಷಣ್, ಬಡಗಕಾರಂದೂರು ಶಾಲಾ ಶಿಕ್ಷಕಿ ಮಂಗಳಾ ಕೆ., ಯುವವಾಹಿನಿ ವೇಣೂರು ಘಟಕ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ, ಸುರೇಶ್ ಪೂಜಾರಿ ನಾವರ, ಪ್ರಸನ್ನ ಹೆಗ್ಡೆ ಕರಂಬಾರುಗುತ್ತು, ಸದಾಶಿವ ಶೆಟ್ಟಿ ಅಳದಂಗಡಿ, ಅಳದಂಗಡಿ ಸಿ.ಎ ಬ್ಯಾಂಕ್ ನಿವೃತ್ತ ಸಿಇಓ ಸುರೇಶ್ ಕುಮಾರ್, ಅಮ್ಮುಕುಮಾರ್ ಕೆದ್ದು, ಕೊರಗಪ್ಪ ಪೂಜಾರಿ ನೀರಲ್ಕೆ, ಯಶೋಧರ ಸುವರ್ಣ ಬಿಕ್ಕಿರ, ಅಳದಂಗಡಿ ಹಾ.ಉ.ಸ.ಸಂಘದ ನಿರ್ದೇಶಕ ಧರ್ಣಪ್ಪ ಪೂಜಾರಿ ದೋರಿಂಜ, ಹರೀಶ್ ಪೂಜಾರಿ ಪಿಲ್ಯ, ಪುಷ್ಪಾ, ಶ್ರೀಗುರು ಮೋಟಾರ್ಸ್ ಮಾಲಕ ಜಯ ಪೂಜಾರಿ, ಅಳದಂಗಡಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೊರಗಪ್ಪ ಎಂ., ಬಾಲಚಂದ್ರ ಮಡಿವಾಳ, ಮೋಹನ್ ಎ. ದಾಸ್, ಪ್ರಶಾಂತ್ ಶೆಟ್ಟಿ ಬೊಳ್ಳಿಮಾರು, ರವಿ ಪೂಜಾರಿ ಪಾಡಿಮನೆ, ಬಡಗಕಾರಂದೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಪೂಜಾರಿ, ಸುದ್ದಿ ಬಿಡುಗಡೆ ವರದಿಗಾರರಾದ ಸದಾನಂದ ಸಾಲಿಯಾನ್, ನಿತ್ಯಾನಂದ ನಾವರ, ಜಗನ್ನಾಥ ಶೆಟ್ಟಿ,ಹರೀಶ್ ದೇವಾಡಿಗ ಹಾನಿಂಜ, ಜಗದೀಶ್ ರೈ ಪಾಂಡ್ಯೊಟ್ಟು, ಮಂಜುನಾಥ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ ಪಾಲಬೆ, ರಾಜೇಶ್ ಕುಲಾಲ್ ಬೈರೊಟ್ಟು, ಅಳದಂಗಡಿ ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿ ರಮೇಶ್, ನಾಗಕುಮಾರ್ ಜೈನ್, ಸಿಪ್ರಿಯಾನ್ ಫೆರ್ನಾಂಡಿಸ್, ಶೇಖರ್ ಪೂಜಾರಿ ಅಂಡಿಂಜೆ, ಅಶ್ವಥ್ ಆಚಾರ್ಯ, ಸುದೀಶ್ ಮಡಿವಾಳಬೆಟ್ಟು, ನಿವೃತ್ತ ಶಿಕ್ಷಕ ಯಶೋಧರ ಸುವರ್ಣ, ಕಾಂಗ್ರೆಸ್ ಮುಖಂಡ ದಿನೇಶ್ ಪೂಜಾರಿ, ಸಚಿನ್ ಭಂಡಾರಿ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಸಂಘಟನೆಯ ಪ್ರಧಾನ ಸಂಚಾಲಕರಾದ ಸಂದೀಪ್ ಎಸ್ ನೀರಲ್ಕೆ ಅರ್ವರವರು ಕಾರ್ಯಕ್ರಮ ನಿರ್ವಹಿಸಿದರು
ಸಮಿತಿಯ ಪದಾಧಿಕಾರಿಗಳು,ಟೀಂ ಅಭಯಹಸ್ತ ಯುವ ಬ್ರಿಗೇಡ್ ಪದಾಧಿಕಾರಿಗಳು,ಸದಸ್ಯರುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here