ನಾರಾವಿ: “ತುಳಸಿ ಕ್ರಿಯೇಷನ್ಸ್ ನಾರಾವಿ” ತಂಡ ಅರ್ಪಣೆಯಲ್ಲಿ, “ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ ಬಲ್ಯೊಟ್ಟು” ಇವರ ಸಹಕಾರದೊಂದಿಗೆ, ರತೀಶ್ ಬಲ್ಯೊಟ್ಟು ಹಾಗೂ ಸೂರಜ್ ಪೂಜಾರಿ ಬಲ್ಯೊಟ್ಟು ಇವರ ಶುಭಾಶೀರ್ವಾದದೊಂದಿಗೆ, ಬಲ್ಯೊಟ್ಟು ಶ್ರೀ ಸ್ವಾಮಿ ಕೊರಗಜ್ಜ ದೈವದ ಯಶಸ್ವಿ 3ನೇ ತುಳು ಭಕ್ತಿ ಗೀತೆಯು, ಫೆ. 8ರಂದು ಶ್ರೀ ಕ್ಷೇತ್ರದ ಕೋಲೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಯಾಯಿತು.
ಈ ತುಳು ಭಕ್ತಿ ಗೀತೆಯ ಸಾಹಿತ್ಯ ಮತ್ತು ಹಿನ್ನಲೆ ಧ್ವನಿಯಾಗಿ, ಬರವುದ ಬಿರ್ಸೆ ಪುಗಾರ್ತೆಯ “ಸುಜಿತ್ ಎಸ್ ನಾರಾವಿ” ಯವರು, ಗಾಯಕಿ ಮತ್ತು ಅಭಿನಯ “ವಂದನ ವಿ. ಎಸ್, ಕಾಡುಮನೆ-ಕಲ್ಲುಗುಡ್ಡೆ”, ಛಾಯಾಗ್ರಹಣ “7D ಸಂತು”, ಸಂಕಲನ “ಯಶವಂತ್ ಕುಲಾಲ್ ಗಂಜಿಮಠ”, ಕುಣಿತ ಭಜನೆ ತಂಡ “ಶ್ರೀ ಸಿದ್ದಿ ವಿನಾಯಕ ಭಜನಾ ಮಂಡಳಿ ನೇರ್ಲ-ಇಚ್ಲಂಪಾಡಿ”, ಕುಣಿತ ಭಜನೆ ತಂಡದ ಗುರುಗಳು “ಅಕ್ಷಯ್ ನೇರ್ಲ”, ಮಾಹಿತಿ ಮತ್ತು ಸಹಕಾರ “ಅನಿಲ್ ದೇವಾಡಿಗ ಬಲ್ಯೊಟ್ಟು”, ಧ್ವನಿ ಮುದ್ರಣ “ಗ್ಲಾಡ್ ಸ್ಟೂಡಿಯೋ ಬಿ.ಸಿ. ರೋಡ್”, ಪ್ರಚಾರ ಕಲೆ”ಜಿತೇಶ್ ಸರಪಾಡಿ” ಹಾಗೂ ಗಣ್ಯಾತಿ ಗಣ್ಯರು ಮತ್ತು ಊರ ಪರವೂರ ಸಮಸ್ತರು ಉಪಸ್ಥಿತಿರಿದ್ದರು.
ಈ ಭಕ್ತಿ ಗೀತೆಯು ಸುಜಿತ್ ಎಸ್. ನಾರಾವಿರವರ ಯ್ಯೂಟೂಬ್ ಚಾನೆಲ್ ನಲ್ಲಿ ಮೂಡಿ ಬರುತ್ತಿದ್ದು, ಈಗಾಗಲೇ 2 ಸಾವಿರ ಜನ ವೀಕ್ಷಣೆಯನ್ನು ಪಡೆದಿದೆ.