ಧರ್ಮಸ್ಥಳ: ಗ್ರಾಮದ ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ ಹತ್ತಿರ ಕಾರು ಮತ್ತು ರಿಕ್ಷಾ ನಡುವೆ ಅಪಘಾತ ನಡೆದ ಘಟನೆ ಫೆ. 15 ರಂದು ಸಂಜೆ ನಡೆದಿದೆ.
ಧರ್ಮಸ್ಥಳದಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ಧರ್ಮಸ್ಥಳ ನಿವಾಸಿ ಆಟೋ ಚಾಲಕ ಅನಿಲ್ ಎಂದು ಗುರುತಿಸಲಾಗಿದೆ. ಹಾಗೂ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಕಾರು ನಡುವೆ ಅಪಘಾತ ಸಂಭವಿಸಿ ರಿಕ್ಷಾ ಚಾಲಕನ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಹಾಗೂ ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಧನ್ವಿ ಆಂಬುಲೆನ್ಸ್ ಸಹಾಯದಿಂದ ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಮೂಲದ ಕಾರಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಅಪಘಾತದ ರಭಸಕ್ಕೆ ಸೇವಾ ಭಾರತೀಯ ಸಮೀಪದ ಗುಂಡಿಗೆ ಮಗುಚಿ ಬಿದ್ದು ತಕ್ಷಣ ಸ್ಥಳೀಯರು ಇದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಹಾಗೂ ರಿಕ್ಷಾ ಸಂಪೂರ್ಣ ಹಾನಿಯಾಗಿದ್ದು, ಸ್ಥಳದಲ್ಲಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಹಿಸಿದ್ದಾರೆ.