

ಬೆಳ್ತಂಗಡಿ: ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ-ಸಬಾಷ್ಟಿಯನ್ ಪಿ. ಟಿ. ಕಳೆಂಜ ಆಯ್ಕೆಗೊಂಡಿದ್ದು ಫೆ.12ರಂದು ದ. ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.
ಶಾಹುಲ್ ಹಮೀದ್ ಅವರಿಂದ ನೇಮಕಾತಿ ಆದೇಶ ಪತ್ರವನ್ನು ಪಡೆದರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳು, ಕಳೆಂಜ ಗ್ರಾಮದ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.