

ಅರಸಿನಮಕ್ಕಿ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪಾಕಶಾಲೆ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 1ಲಕ್ಷ ರೂ ಮೊತ್ತದ ಡಿ. ಡಿ. ಯನ್ನು ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಬ್ರಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ಎಂ. ಪಿ. ರಾಜಗೋಪಾಲರವರಿಗೆ ಹಸ್ತಾಂತರಿಸಿದರು.
ಹತ್ಯಡ್ಕ ಸಿ. ಎ. ಬ್ಯಾಂಕ್ ನಿರ್ದೇಶಕ ಧರ್ಮರಾಜ್ ಗೌಡ ಅಡ್ಕಾಡಿ, ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ. ಎಸ್., ಗಂಗಾಧರ್ ಕುಲಾಲ್, ಒಕ್ಕೂಟದ ಅಧ್ಯಕ್ಷರಾದ ವಿಠಲ ಅಡಪ, ಪ್ರಭಾಕರ್ ಶೆಟ್ಟಿಗಾರ್, ಸರೋಜಿನಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ವಲಯ ಮೇಲ್ವಿಚಾರಕ ಶಶಿಕಲಾ ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.