

ಬೆಳ್ತಂಗಡಿ: ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಆಯೋಜಿಸಿದ ಕುಂಬಾರರ ಮಾಗಣೆ ಮಟ್ಟದ ಕ್ರೀಡಾಕೂಟ ಮಹಾಮಾಯಿ ಟ್ರೋಫಿ 2025, 24 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟವು ಬೆಳ್ತಂಗಡಿಯ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಫೆ. 9ರಂದು ಜರಗಿತು.
ಈ ಕಾರ್ಯಕ್ರಮದಲ್ಲಿ ಸಿನಿಮಾ, ಜಾದು, ರಂಗಭೂಮಿ ಹಾಗೂ ಸಮಾಜಸೇವೆಯಲ್ಲಿ ವಿಶೇಷ ಸಾಧನೆ ಮಾಡಿದ ರಾಜೀವ್ ಬಿ.ಎಚ್ ರವರಿಗೆ ಸಂಘದ ವತಿಯಿಂದ” ಕಲಾರತ್ನ,”ಪ್ರಶಸ್ತಿ ನೀಡಿ ಗೌರವಿಸಲಾಯಿತು.