

ಬೆಳ್ತಂಗಡಿ: ಗುರುವಾಯನಕೆರೆಯ ಕೆ.ಇ.ಬಿ. ರಸ್ತೆಯಲ್ಲಿ ಶ್ರೀ ಕೃಷ್ಣ ಎಂಟರ್ ಪ್ರೈಸಸ್ ಸಿ.ಎನ್.ಜಿ ಫಿಟ್‌ಮೆಂಟ್ ಸೆಂಟರ್ ಫೆ. 9 ರಂದು ಶುಭಾರಂಭಗೊಂಡಿತು.

ನೂತನ ಸೆಂಟರ್ ನ ಉದ್ಘಾಟನೆಯನ್ನು ಶಶಿಧರ ಶೆಟ್ಟಿ ಬರೋಡ ಅವರ ಉಪಸ್ಥಿತಿಯಲ್ಲಿ ಮಾಲಕ ವಾಮನ ಆಚಾರ್ಯ ರವರ ಮಕ್ಕಳು ನೆರವೇರಿಸಿದರು.

ಕಾರ್ಯಕ್ರಮದ ದ್ವೀಪ ಪ್ರಜ್ವಲನೆಯನ್ನು ನವಶಕ್ತಿಯ ಶಶಿಧರ ಶೆಟ್ಟಿ ಬರೋಡ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ನಿರ್ದೇಶಕ ಜನಾರ್ದನ್ ಅತ್ತಾವರ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಅರಮಲೆಬೆಟ್ಟದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟ್ನಾಯ, ಬೆಂಗಳೂರಿನ lovato ಡಿಸ್ಟ್ರಿಬ್ಯೂಟರ್ ಶರವಣ, ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿಯ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಲಾಲ್, ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ವಿಶ್ವಕರ್ಮ ಸಂಸ್ಥೆಯ ಮುಖ್ಯಸ್ಥ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಗ್ರಾಹಕರು ಹಾಗೂ ಊರ ಗಣ್ಯರು ಉಪಸ್ಥಿತರಿದ್ದರು.