ಬೆಳಾಲು: ಕೊಲ್ಪಾಡಿ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಫೆ. 6 ಮತ್ತು 7 ರಂದು ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಫೆ. 6ರಂದು ಪೂರ್ವಾಹ್ನ ಗಣಹೋಮ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಮಹಾಪ್ರಸಾದ ನಡೆಯಿತು. ಸಂಜೆ ಬಲಿ ಹೊರಟು ಶ್ರೀ ಸುಬ್ರಹ್ಮಣೇಶ್ವರ ದೇವರ ಉತ್ಸವ ಬಲಿ, ರಂಗಪೂಜೆ, ಶ್ರೀ ಭೂತಬಲಿ ಮತ್ತು ಕಲ್ಕುಡ ದೈವಕ್ಕೆ ನರ್ತನ ಸೇವೆ, ಮಹಾ ಪ್ರಸಾದ ನಡೆಯಿತು.

ಫೆ. 7ರಂದು ಬೆಳಿಗ್ಗೆ ಗಣಹೋಮ, ಉತ್ಸವ ಬಲಿ ಪ್ರಾರಂಭ, ದರ್ಶನ ಬಲಿ, ದರ್ಶನ ಪ್ರಸಾದ ವಿತರಣೆ, ಸಂಪ್ರೋಕ್ಷಣೆ, ಮಹಾಪೂಜೆ, ಮಧ್ಯಾಹ್ನ ಮಹಾಪ್ರಸಾದ ನಡೆಯಿತು.