

ಉಜಿರೆ: ಮಂಜುಶ್ರೀ ಮುದ್ರಣಾಲಯದಲ್ಲಿ ಸುದೀರ್ಘ 42 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರೊಡಕ್ಷನ್ ವಿಭಾಗದ ಮೇಲ್ವಿಚಾರಕರಾಗಿ, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ನಿವೃತ್ತರಾದ ವಿಶ್ವನಾಥ ಶೆಟ್ಟಿಯವರಿಗೆ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭವನ್ನು ಎಸ್.ಡಿ.ಎಂ. ಮಹಿಳಾ ಐ.ಟಿ.ಐ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್. ಸತೀಶ್ಚಂದ್ರರವರು ವಿಶ್ವನಾಥ ಶೆಟ್ಟಿ ಮತ್ತು ವನಿತಾ ವಿಶ್ವನಾಥ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿ, ಅವರು ಸಂಸ್ಥೆಗೆ ಸುದೀರ್ಘ 2 ದಶಕಗಳ ಕಾಲ ಸೇವೆ ಸಲ್ಲಿಸಿದ ವಿಶ್ವನಾಥ ಶೆಟ್ಟರ ಸೇವೆಯನ್ನು ಪ್ರಶಂಸಿದರು.
ಸಹೋದ್ಯೋಗಿ ಮೋನಪ್ಪ ಟಿ. ಹಾಗೂ ಚಿತ್ತರಂಜನ್ ವಿಶ್ವನಾಥ ಶೆಟ್ಟರ ಕಾರ್ಯವೈಖರಿ ಕುರಿತು ಅನುಭವ ಹಂಚಿಕೊಂಡರು.
ಮಂಜುಶ್ರೀ ಮುದ್ರಣಾಲಯದ ವ್ಯವಸ್ಥಾಪಕ ಶೇಖರ್ ಟಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರವಿ ಪರಕ್ಕಜೆ ನಿರೂಪಿಸಿದರು. ಮುದ್ರಣಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಹಾಯಕ, ವ್ಯವಸ್ಥಾಪಕ ವೆಂಕಪ್ಪ ವಂದಿಸಿದರು.