

ಮಿತ್ತಬಾಗಿಲು: ಮಲವಂತಿಗೆ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣ ಪ್ರಾರಂಭದ ಸಂದರ್ಭ ನಾರಾಯಣ ಗುರುಗಳ ಆಶೀರ್ವಾದದಂತೆ ಅತೀ ಕಡಿಮೆ 4 ತಿಂಗಳ ಅವಧಿಯಲ್ಲಿ ಭವ್ಯ ಮಂದಿರದ ಜೊತೆಗೆ ಗುರು ಭವನ ನಿರ್ಮಾಣ ಆಗಿತ್ತು.
ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕದ ದಿನದಂದು ಕಾಜೂರಿನ ಪದ್ಮಾವತಿಯವರ ಲಕ್ಷಾಂತರ ರೂಪಾಯಿ ಮೌಲ್ಯದ ಎರಡು ಪವನ್ ಮಾಂಗಲ್ಯ ಸರಮಾಲೆ ಕಳೆದುಕೊಂಡು ಬಿಟ್ಟಿದ್ದರು. ಹುಡುಕಾಟ ಕೂಡ ಆ ಸಮಯದಲ್ಲಿ ನಡೆಸಲಾಗಿತ್ತು.
ಗುರುಗಳ ಮೌಲ್ಯ ಅರಿತ ಅವರು ಏನಾದರೂ ಮಾಂಗಲ್ಯ ಸರಮಾಲೆ ಸಿಕ್ಕಿದರೆ ಗುರು ಪೂಜೆ ಇದೇ ಮಂದಿರದಲ್ಲಿ ನಡೆಸುತ್ತೇನೆ ಎಂದು ಹರಕೆ ಹೊತ್ತುಕೊಂಡರು.
ಕಲಶೋತ್ಸವ ಕಳೆದು 1 ತಿಂಗಳ ಒಳಗಾಗಿ ಅವರ ಮಾಂಗಲ್ಯ ಸರಮಾಲೆ ಯಾವುದೇ ರೀತಿಯಲ್ಲಿ ಕಳೆಗುಂದದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ಆವರಣದಲ್ಲಿ ಸಿಕ್ಕಿದೆ.
ಮಾಂಗಲ್ಯ ಸರಮಾಲೆ ಸಿಕ್ಕಿದ ಸಮಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ ಸಮಯ ಒಂದೇ ಆಗಿದ್ದು, ಪವಾಡ ನಡೆಯಿತ್ತೆಂದು ಸಾರ್ವಜನಿಕರ ಅಭಿಪ್ರಾಯ.