ಕಳೆಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯದ ಕಳೆಂಜ ಗ್ರಾಮದ ಶಾಲೆ ಮನೆ ಎಂಬಲ್ಲಿ ವಾಸವಿರುವ ವಸಂತ ಗೌಡರವರು ಪಾಶ್ವವಾಯು ಅನಾರೋಗ್ಯ ಸಮಸ್ಯೆಯಲ್ಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗುರುತಿಸಿ ಅವರಿಗೆ ಡಿ. ವೀರೇಂದ್ರ ಹೆಗ್ಗಡೆ ಮಂಜೂರು ಮಾಡಿರುವ 25,000 ರೂ. ಸಹಾಯಧನದ ಮಂಜೂರಾತಿ ಪತ್ರವನ್ನು ಕೇಂದ್ರ ಕಚೇರಿಯ ಬಿ.ಸಿ. ವಿಭಾಗದ ನಿರ್ದೇಶಕ ವಸಂತ ವಿತರಿಸಿದರು.
ಕಳೆಂಜ ಬಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ನೂತನ ಅಧ್ಯಕ್ಷ ಸವಿತಾ, ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ., ವಿ. ಎಲ್. ಇ ಕಸ್ತೂರಿ ಹಾಗೂ ಸೇವಾ ಪ್ರತಿನಿಧಿ ಗೀತಾ ಉಪಸ್ಥಿತರಿದ್ದರು.