ಬೆಳ್ತಂಗಡಿ:ಫ್ರೆಂಡ್ಸ್ ಬದ್ಯಾರ್ ಐ.ಸಿ.ವೈ.ಎಂ. ಬದ್ಯಾರ್ ಘಟಕ ಹಾಗೂ ಸಂತ ರಫಾಯೆಲ್ ಚರ್ಚ್ ಬದ್ಯಾರ್, ಸಹಕಾರದೊಂದಿಗೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಕಂಕನಾಡಿ ಮಂಗಳೂರು ಹಾಗೂ ಫಾದರ್ ಎಲ್. ಎಂ. ಪಿಂಟೋ ಆಸ್ಪತ್ರೆ ಬದ್ಯಾರ್ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು ಫೆ. 2ರಂದು ಫಾದರ್ ಎಲ್. ಎಂ. ಪಿಂಟೋ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಇಲ್ಲಿನ ಆಡಳಿತ ನಿರ್ದೇಶಕರು ಫಾ. ರೋಶನ್ ಕ್ರಾಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು. ವೇದಿಕೆಯಲ್ಲಿ ಫ್ರೆಂಡ್ಸ್ ಬದ್ಯಾರಿನ ಅಧ್ಯಕ್ಷ ಸಂದೀಪ್ ಡಿಸೋಜಾ, ಕಾರ್ಯದರ್ಶಿ ಕೆವಿನ್ ಡಿಸೋಜಾ, ಬ್ಲಡ್ ಹೆಲ್ಪ್ ಲೈನ್ ನ ಕಾರ್ಯಕರ್ತ ಮೊಹಮದ್ ರಾಜ್ವಿನ್, ಐ.ಸಿ.ವೈ.ಎಂ. ಉಪಾದ್ಯಕ್ಷ ಅವಿನಾಶ್ ಮೋನಿಸ್ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಬ್ಲಡ್ ಬ್ಯಾಂಕ್ ನ ಮುಖ್ಯಸ್ಥೆ ಉಪಸ್ಥಿತರಿದ್ದರು.
ವೀಣಾ ಪೈಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಶಿಬಿರದಲ್ಲಿ ಒಟ್ಟು 63 ರಕ್ತದಾನಿಗಳು ತಮ್ಮ ರಕ್ತವನ್ನು ನೀಡಿ ಮಾನವೀಯತೆ ಮೆರೆದು ಶಿಬಿರದ ಯಶಸ್ವಿಗೆ ಸಹಕಿರಿಸಿದರು. ಕೆವಿನ್ ಡಿಸೋಜಾ ವಂದಿಸಿದರು.