ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅಜಿತ್ ಕುಮಾರ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಜಯಂತ ಶೆಟ್ಟಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಅಡಳಿತ ಮಂಡಳಿ ನಿರ್ದೇಶಕರಾಗಿ ಎಸ್. ಜಯರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಹೆಚ್., ಎಂ. ಜಯರಾಮ ಭಂಡಾರಿ, ಎಂ. ಗೋಪಾಲಕೃಷ್ಣ ಶೆಟ್ಟಿ, ಕೃಷ್ಣ ರೈ, ಜಯಂತ ಶೆಟ್ಟಿ, ಮಂಜುನಾಥ ರೈ, ಸೀತಾರಾಮ ಶೆಟ್ಟಿ, ಜಯರಾಮ ಶೆಟ್ಟಿ ಎಂ., ಪುಷ್ಪರಾಜ ಶೆಟ್ಟಿ, ರಾಜು ಶೆಟ್ಟಿ, ರಘುರಾಮ ಶೆಟ್ಟಿ, ಅದೇ ರೀತಿ ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಪುರಂದರ ಶೆಟ್ಟಿ, ಸಾರಿಕ ಶೆಟ್ಟಿ, ವಿಜಯ ಬಿ. ಶೆಟ್ಟಿ ಆಯ್ಕೆ ಆಗಿದ್ದಾರೆ.
ಶಾಸಕ ಹರೀಶ್ ಪೂಂಜ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭಹಾರೈಸಿದರು.