ಬೆಳ್ತಂಗಡಿ: ಫೆ. 1 ರಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಸ. ಪ. ಪೂ. ಕಾಲೇಜು ಬೆಳ್ತಂಗಡಿ ಇದರ ಸರೋಜಿನಿ ನಾಯ್ಡು ರೇಂಜರ್ಸ್ ಘಟಕ ಹಾಗೂ ಬೆಳ್ತಂಗಡಿ ಟ್ರಾಫಿಕ್ ಪೊಲೀಸ್ ಠಾಣೆ ಇವುಗಳ ಜಂಟಿ ಆಶ್ರಯದಲ್ಲಿ ‘ರಸ್ತೆ ಸುರಕ್ಷತೆ ಮತ್ತು ವೃತ್ತಿ ಮಾರ್ಗದರ್ಶನ’ ಎಂಬ ವಿಷಯದ ಕುರಿತು ಅರ್ಜುರ್ ಎಚ್. ಕೆ., ವೃತ್ತ ನಿರೀಕ್ಷಕರು ಟ್ರಾಫಿಕ್ ಪೊಲೀಸ್ ಠಾಣೆ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು.
ಹದಿಹರೆಯದ ವಯೋಮಾನದವರಲ್ಲಿ ರಸ್ತೆ ಸುರಕ್ಷತೆಯ ಅಗತ್ಯತೆ ಹಾಗೂ ಪೊಲೀಸ್ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲ ಸುಕುಮಾರ ಜೈನ್ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕು ಎಂಬ ಸಲಹೆಯನ್ನು ನೀಡಿದರು.
300 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ರೇಂಜರ್ಸ್ ವಿದ್ಯಾರ್ಥಿನಿಯರಾದ ಚಿಂತನ ಸ್ವಾಗತಿಸಿ, ಕೀರ್ತನ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞ ವಂದಿಸಿದರು.