ಬಳಂಜ: 2024-25 ನೇ ಸಾಲಿನ ಎರಡನೇ ಸುತ್ತಿನ ಗ್ರಾಮ ಸಭೆಯು ಫೆ. 01ರಂದು ಬಳಂಜ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ಮುಖ್ಯ ಪಶು ವೈಧ್ಯಾಧಿಕಾರಿ ಡಾ.ವಿಶ್ವನಾಥ್ ಸಭೆಯನ್ನು ಮುನ್ನಡೆಸಿದರು.
ನಾಡಗೀತೆಯೊಂದಿಗೆ ಪ್ರಾರಂಭಗೊಂಡ ಸಭೆ ನೀರಿನ ಪೈಪ್ ಲೈನ್ ಹಾಗು ದಾರಿದೀಪದ ಬಗ್ಗೆ ಬಹಳಷ್ಟು ಚರ್ಚೆ ನಡೆದವು. ಯಾವುದೇ ಕಾಮಗಾರಿ ನಡೆಯಬೇಕಾದರು ಕಂಟ್ರಾಕ್ಟರ್ ಅಗತ್ಯ. ಆದರೆ ನಮ್ಮ ಊರಿಗೆ ಯಾವುದೇ ಕಂಟ್ರಾಕ್ಟರ್ ಬರುದಿಲ್ಲ. ಅದಕ್ಕಾಗಿ ನೀವೇ ಕಂಟ್ರಾಕ್ಟರ್ ಅನ್ನು ಕರೆತನ್ನಿ. ಅವರಿಗೆ ಎಲ್ಲ ಕೆಲಸದ ಬಗ್ಗೆ ಸೌಕರ್ಯವನ್ನು ಮಾಡಿಕೊಡುವ ಎಂದು ಪಿ ಡಿ ಓ ಗ್ರಾಮಸ್ಥರಿಗೆ ತಿಳಿಸಿದರು.
ಪೈಪ್ ಲೈನ್ ಗೆ ತೆಗೆದ ಗುಂಡಿ ಮುಚ್ಚದೆ ರಸ್ತೆ ಎಲ್ಲ ಹಾಳಾಗಿ ಹೋಗಿದೆ ಸಮಸ್ಯೆ ಕೇಳುವರಿಲ್ಲ. ಚರಂಡಿಯ ವ್ಯವಸ್ಥೆ ಇಲ್ಲದೆ ಎಲ್ಲ ನೀರು ರಸ್ತೆಯಲ್ಲಿ ಹೋಗುತ್ತಾ ಇದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವಂತೆ ಮನವಿ ಮಾಡಿದರು. ಕುಕ್ಕೆಟ್ಟು ಗ್ರಾಮದ ಕರೆಂಟ್ ವೋಲ್ಟೇಜ್ ಹಾಗು ದಾರಿ ದೀಪ, ವಿದ್ಯುತ್ ಕಂಬ ರಸ್ತೆ ಬದಿಯಲ್ಲಿ ಇದ್ದು ಸಮಸ್ಯೆ ಉಂಟಾಗುತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಜೆ ಈ ಗೆ ಕುಕ್ಕೆಟ್ಟು ಗ್ರಾಮಸ್ಥರು ಮನವಿ ಮಾಡಿದರು. ಸೋಲಾರ್ ಲೈಟ್ ಕಂಬ ಕಳವು ಆಗಿರುವುದರ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚಿಸಲಾಯಿತು. ರಸ್ತೆ ಕಾಮಗಾರಿ ಸರಿ ಇಲ್ಲದಿರುವುದರಿಂದ ಮರು ಪರಿಶೀಲನೆಗೆ ಒತ್ಹಾಯಿಸಿದರು. ಎ ಪಿ ಲ್ ಪಡಿತರಿಗೆ ಸರಿಯಾದ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಪಡಿತರಿಯನ್ನು ಒದಗಿಸಬೇಕೆಂದು ಗ್ರಾಮಸ್ಥರ ಪರವಾಗಿ ಪ್ರಮೋದ್ ಕುಮಾರ್ ಜೈನ್ ಆಗ್ರಹಿಸಿದರು.
ಉಪಾಧ್ಯಕ್ಷ ಶಶಿಧರ್ ಶೆಟ್ಟಿ ಹಾಗೂ ಸದಸ್ಯರಾದ ಹೇಮಂತ್, ಬಾಲಕೃಷ್ಣ ಪೂಜಾರಿ, ಜಯ ಶೆಟ್ಟಿ, ರವೀಂದ್ರ ಬಿ ಅಮೀನ್, ನಿಜಾಂ, ಬೇಬಿ ಎನ್, ಯಕ್ಷಿತ ಕೆ, ಸುಚಿತ್ರ ಕೆ, ಪಧ್ಮಾವತಿ, ಪ್ರಸನ್ನ ಕುಮಾರಿ, ಲೀಲಾ ಹಾಗೂ ಪಂಚಾಯತ್ ನ ಎಲ್ಲಾ ಸಿಬ್ಬಂಧಿ ವರ್ಗದವರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ಧರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ, ಧನ್ಯವಾದವಿತ್ತರು. ಶಶಿಕಲಾ ಶೆಟ್ಟಿ ಅನುಪಾಲನ ವರದಿ ವಾಚಿಸಿದರು.