ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ಅವರು ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದರೆ.
ವಿಶೇಷವೆಂದರೆ ಈ ಮಹಾ ಅರ್ಚಕ ಸ್ಥಾನವನ್ನು ಈ ವರೆಗೆ ಪಡೆದವರಲ್ಲಿ ಸತ್ಯನಾರಾಯಣ ತೋಡ್ತಿಲ್ಲಾಯರು ಅತಿ ಕಿರಿಯರು ಎನ್ನಲಾಗಿದೆ. ಇನ್ನು ಇವರು ಅರ್ಚಕರಾಗಿ ಸೇರಿದ 6 ತಿಂಗಳಲ್ಲೇ ಇವರಿಗೆ ಈ ಮಹಾ ಪ್ರಧಾನ ಅರ್ಚಕ ಸ್ಥಾನ ಸಿಕ್ಕಿದೆ.
ಇವರು ಕೊಕ್ಕಡದ ದಿ। ಸುಬ್ರಾಯ ತೋಡ್ತಿಲ್ಲಾಯ ಹಾಗೂ ಶಾರದಾ ದಂಪತಿಯ ಎರಡನೇ ಪುತ್ರನಾಗಿದ್ದಾರೆ. ಒಮ್ಮೆ ಪ್ರಧಾನ ಹುದ್ದೆಗೇರಿದ ಬಳಿಕ ಗೃಹಸ್ಥಾಶ್ರಮ ತೊರೆದು ಸನ್ಯಾಸಿಯಂತೆ ಇರಬೇಕು. ಜತೆಗೆ ದೇವರ ಯಾವುದೇ ಉತ್ಸವಗಳಿಗೆ ಇವರದೇ ಪ್ರಧಾನ ಪೌರೋಹಿತ್ಯವಾಗಿರುತ್ತದೆ. ಸತ್ಯನಾರಾಯಣ ಅವರು ಜ.30ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.