ಗುರುವಾಯನಕೆರೆ: ಫೆ. 9 ರಿಂದ 13 ರವರೆಗೆ ನಡೆಯುವ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವದ ಪ್ರಯುಕ್ತ ಜ. 30 ರಂದು ದೈವಸ್ಥಾನದ ವಠಾರದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.
ಪ್ರಧಾನ ಅರ್ಚಕ ಕೆ. ರತ್ನಾಕರ ನೂರಿತ್ತಾಯರವರ ಪೂಜಾ ವಿಧಿ-ವಿಧಾನದೊಂದಿಗೆ 40 ವರ್ಷದಿಂದಲೂ ದೈವದ ಚಾಕರಿ ಮಾಡಿಕೊಂಡು ಬರುತ್ತಿದ್ದ ಸ್ಥಳೀಯ ಹಿರಿಯರಾದ ಕಾಂತಪ್ಪ ನಾಯ್ಕ ಕಡಂಬು ಹಾಗೂ ನಾರಾಯಣ ನಾಯ್ಕ ಈ ಚಪ್ಪರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸುಖೇಶ್ ಕುಮಾರ್ ಕಡಂಬು, ಬ್ರಹ್ಮಕುಂಭಾಭಿಷೇಕ ಸಮಿತಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಅರಮನೆ ಅರ್ಥ್ ಮೂವರ್ಸ್ ಮಾಲಕ ಸುನೀಶ್ ಕುಮಾರ್, ಸನ್ಮತಿ ಜೈನ್, ಆನಂದ ಶೆಟ್ಟಿ ವಾತ್ಸಲ್ಯ, ವಿಠ್ಠಲ್ ಆಚಾರ್ಯ ಬದ್ಯಾರ್, ಚಂದ್ರಹಾಸ್ ದಾಸ್ ಹಾಗೂ ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿ ಚಪ್ಪರ ಮುಹೂರ್ತ ನಡೆದು ಅಧಿಕೃತವಾಗಿ ಬ್ರಹ್ಮಕುಂಭಾಭಿಷೇಕದ ಪೂರ್ವಸಿದ್ಧತೆ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಯಿತು.