ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ – ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಗೆ 11 ಸ್ಥಾನ, ಕಾಂಗ್ರೆಸ್ ಬೆಂಬಲಿತ 1 ಸ್ಥಾನ

0

ತಣ್ಣೀರುಪಂತ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಯ‌ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ 27 ಮುಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಚುನಾವಣೆ ಜ. 27 ರಂದು ಸಂಘದ ಕಚೇರಿ ಆವರಣದಲ್ಲಿ ನಡೆಯಿತು.

ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಲ್ಲಿ ಜಗದೀಶ್ ಮೈರ, ಸಾಮ್ರಾಟ್ ಕಲ್ಲೇರಿ, ಸುನಿಲ್ ಅಣವು, ಜಯಾನಂದ ಕಲ್ಲಾಪು, ಮಹಿಳಾ ಕ್ಷೇತ್ರದಿಂದ ಜಯಂತಿ ಪಾಲೇದು, ಸರೋಜಿನಿ ವಿಜಯ ಕುಮಾರ್ ಕಲ್ಲಳಿಕೆ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರಜನಿನಾಥ್ ಮುಂದಿಲ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಕೃಷ್ಣಪ್ಪ ಗೌಡ, ಪ.ಜಾತಿ ಕ್ಷೇತ್ರದಿಂದ ಸುರೇಶ್ ಎಚ್. ಎಲ್., ಪ.ಪಂಗಡ ಕ್ಷೇತ್ರದಿಂದ ಶ್ರೀನಿವಾಸ್ ಜಯಗಳಿಸಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಪ್ರಭಾಕರ ಗೌಡ ಪೋಸೋಂದೊಡಿ ಮತ್ತು ರೋಹಿತ್ ಕುಪ್ಪೆಟ್ಟಿ 512 ಮಾತುಗಳನ್ನು ಪಡೆದು ಟೈಯಾಗಿದ್ದು, ಚುನಾವಣಾಧಿಕಾರಿಯವರ ತೀರ್ಮಾನದ ಮೇರೆಗೆ ಮೊದಲ ಎರಡುವರೆ ವರ್ಷಗಳ ಅವಧಿಗೆ ರೋಹಿತ್ ಕುಪ್ಪೆಟ್ಟಿ ನಂತರದ ಎರಡುವರೆ ವರ್ಷಗಳ ಅವಧಿಗೆ ಪ್ರಭಾಕರ ಗೌಡ ಪೋಸೋಂದೊಡಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಸಾಮಾನ್ಯ ಕ್ಷೇತ್ರದಿಂದ ಜಯ ವಿಕ್ರಂ ಕಲ್ಲಾಪು ಜಯಗಳಿಸಿದ್ದಾರೆ.

LEAVE A REPLY

Please enter your comment!
Please enter your name here