


ಕುವೆಟ್ಟು: ಸ. ಉ. ಪ್ರಾ. ಶಾಲೆ ಕುವೆಟ್ಟು ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಎಸ್. ಡಿ. ಎo. ಸಿ ಅಧ್ಯಕ್ಷ ಸಿರಾಜ್ ಎಂ. ಚಿಲಿಂಬಿ ದ್ವಜಾರೋಹಣ ನೆರವೇರಿಸಿದರು. ಶಾಲಾ ಎಸ್. ಡಿ. ಎo. ಸಿ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಅಧ್ಯಾಪಕರು ಮತ್ತು ಅಡುಗೆ ಸಿಬ್ಬಂದಿಯವರು ಭಾಗವಹಿಸಿದ್ದರು.


ತದನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಎಸ್. ಡಿ. ಎo. ಸಿ ಅಧ್ಯಕ್ಷ ಸಿರಾಜ್ ಚಿಲಿoಬಿ ವಹಿಸಿದ್ದರು. ಶಾಲಾ ನಾಯಕಿ ಶಿವಾನಿ, ವಿದ್ಯಾರ್ಥಿಗಳು ಮತ್ತು ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್ ಸ್ವಾಗತಿಸಿ, ಸಹ ಶಿಕ್ಷಕ ಕಿರಣ್ ಎಸ್. ಪಿ. ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ದವಲಾ ಎ. ದಿನದ ಮಹತ್ವವನ್ನು ತಿಳಿಸಿ, ಅತಿಥಿ ಶಿಕ್ಷಕಿ ಚೈತ್ರ ವಂದಿಸಿದರು.









