ಕಡಿರುದ್ಯಾವರ: ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ. ಪಂ. ಅಧ್ಯಕ್ಷೆ ರತ್ನಾವತಿ ಅಧ್ಯಕ್ಷತೆಯಲ್ಲಿ ಜ. 27 ರಂದು ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜರುಗಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಸರಕಾರಿ ಪ್ರೌಢ ಶಾಲೆ ಕಕ್ಕಿಂಜೆಯ ಮುಖ್ಯೋಪಾಧ್ಯಾಯ ಶಂಭು ಶಂಕರ್ ಭಾಗವಹಿಸಿದ್ದರು.
ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತು ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷೆ ಸಾವಿತ್ರಿ, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್, ಬೇಬಿ, ಸೂರಜ್ ಗೌಡ ವಳಂಬ್ರ, ರಾಜೇಶ್ ಗೌಡ, ಗುರುಪ್ರಸಾದ್, ಲಾವಣ್ಯ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜನಾರ್ದನ ಗೌಡ ಅನುಪಾಲನ ವರದಿ ವಾಚಿಸಿದರು. ವಿತೇಶ್ ಕೋಟ್ಯಾನ್ ಜಮಾ ಖರ್ಚುಗಳ ವಿವರವನ್ನು ಮಂಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬನಪ್ಪ ಗೌಡ್ರ ಸ್ವಾಗತಿಸಿ, ವಂದಿಸಿದರು.