170ನೇ ಗುರು ಪೂಜೆಯ ಪ್ರಯುಕ್ತ ಸಾರ್ವಜನಿಕ ಶನ್ಯೆಶ್ಚರ ಪೂಜೆ

0

ಕುವೆಟ್ಟು: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮಹೀಳಾ ಬಿಲ್ಲವ ವೇದಿಕೆ ಯುವ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಇದರ ವತಿಯಿಂದ 170ನೇ ಗುರು ಪೂಜೆಯ ಪ್ರಯುಕ್ತ ಸಾರ್ವಜನಿಕ ಶನ್ಯೆಶ್ಚರ ಪೂಜೆ ಜ. 25 ರoದು ಕುವೆಟ್ಟು ಬಯಲು ಗದ್ದೆಯಲ್ಲಿ ಮುಂಡೂರು ಗೋಪಾಲ ಕೃಷ್ಣ ಭಟ್ ಮಾಲಾಡಿ ಇವರ ನೇತೃತ್ವದಲ್ಲಿ ಜರಗಿತು.

ದುರ್ಗಾಂಭ ಭಜನಾ ಮಂಡಳಿ ಬಂಟ್ವಾಳ ಸದಸ್ಯರಿಂದ ವಿಶೇಷ ಭಜನಾ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.

ಸಮಿತಿಯ ಗೌರವಾಧ್ಯಕ್ಷ ಸತೀಶ್ ಬoಗೇರ ಕುವೆಟ್ಟು ಅಧ್ಯಕ್ಷ ಚಂದ್ರಶೇಖರ ಕೋಟ್ಯಾನ್, ಕಾರ್ಯದರ್ಶಿ ಆನಂದ ಕೋಟ್ಯಾನ್ ಗುರುವಾಯನಕೆರೆ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್ ಪಾದೆ, ಜತೆ ಕಾರ್ಯದರ್ಶಿ ಮೇಘನಾಥ್ ವರಕಬೆ, ಕೋಶಾಧಿಕಾರಿ ಗೋಪಿನಾಥ್ ದಾಸ್ ನ್ಯಾಯಕಲ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷ ಜಯಂತಿ ಅಶೋಕ್ ಜಾಲಿಯರಡ್ಡ, ಉಪಾಧ್ಯಕ್ಷೆ ಜನಿತಾ ರಾಘವ ವರಕಬೆ, ಕಾರ್ಯದರ್ಶಿ ನಳಿನಿ ಜನಾರ್ಧನ ಜಾಲಿಯರಡ್ಡ, ಕೋಶಾಧಿಕಾರಿ ವಿಮಲಾ ಜೆ. ಬಂಗೇರ ಹೇರಾಜೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಅನೂಪ್ ಬಂಗೇರ, ಉಪಾಧ್ಯಕ್ಷ ಅಜಿತ್ ಕುಮಾರ್, ಕಾರ್ಯದರ್ಶಿ ಹರೀಶ್ ಕೋಟ್ಯಾನ್, ಮುಂದಿನ 2 ವರ್ಷದ ಅವಧಿಗೆ ನಿಯೋಜಿತ ಅಧ್ಯಕ್ಷ ನಾಗೇಶ್ ಆದೇಲು, ಕಾರ್ಯದರ್ಶಿ ಹರೀಶ್ ಅನಿಲ, ಲಲಿತ ಕೇದಳಿಕೆ, ಕಾರ್ಯದರ್ಶಿ ಲಲಿತಾ ವರಕಬೆ, ಹಿರಿಯರಾದ ಚಂದ್ರಹಾಸ ಕೇದೆ, ಜಗದೀಶ್ ಬಂಗೇರ ಕುವೆಟ್ಟು, ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here