ಬೆಳಾಲು: ಶ್ರೀ ಧ. ಮಂ. ಪ್ರೌಢ ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಹಿಂದಿ ಶಿಕ್ಷಕಿ ರಾಜಶ್ರೀ ಸಂವಿಧಾನದ ಮಹತ್ವ ತಿಳಿಸಿದರು.
ವಿದ್ಯಾರ್ಥಿ ಮೋಕ್ಷಿತ್ ದಿನದ ವಿಶೇಷತೆಯನ್ನು ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯ ಜಯರಾಮ್ ಮಯ್ಯ ಸಂವಿಧಾನ ರಚನೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪಾತ್ರದ ಕುರಿತು ತಿಳಿಸಿದರು. ಗಣರಾಜ್ಯೋತ್ಸವದ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಶಿಕ್ಷಕ ಸುಮನ್ ಯು. ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.