ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮ – ಡಾ. ಆಳ್ವರಿಗೆ ನಾಗರೀಕ‌ ಸನ್ಮಾನ

0

ವೇಣೂರು: ಶಿಕ್ಷಣ ಮಾರ್ಗದರ್ಶನ – ಡಾ. ಆಳ್ವರಿಗೆ ನಾಗರೀಕ‌ ಸನ್ಮಾನ ” ಸಕಾಲದ ಸೂಕ್ತ ನಿರ್ಧಾರ ಯಶಸ್ಸಿನ ರಹಸ್ಯ. ಡಾ. ಆಳ್ವ. ‌‌‌‌ ಎಸ್. ಎಸ್. ಎಲ್. ಸಿ ಎಂಬುದು ಶಿಕ್ಷಣದ ಪ್ರಮುಖ ಹಂತ. ಪಿ. ಯು. ಸಿ ಶಿಕ್ಷಣದ ಹಂತದಲ್ಲಿ ಬರುವ ಬಹು ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಸರಿಯಾದ ಮಾಹಿತಿ ಅಗತ್ಯ.

ಪಿ. ಯು. ಸಿ ಯನ್ನು ಪೂರೈಸುವುದಷ್ಟೆ ಧ್ಯೇಯವಲ್ಲ. ಸ್ಪರ್ಧಾತ್ಮಕ‌ ಪರೀಕ್ಷೆಗಳನ್ಬು ಸಮರ್ಥವಾಗಿ ಎದುರಿಸಿ ಭವಿಷ್ಯ ರೂಪಿಸುವಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೋಲಬಾರದು. ಸಕಾಲದಲ್ಲಿ ಮಾಡುವ ಸರಿಯಾದ ನಿರ್ಧಾರದಲ್ಲಿ ನಮ್ಮ ಯಶಸ್ಸು ನಿಂತಿದೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಡಾ. ಎಂ. ಮೋಹನ. ಆಳ್ವ ನುಡಿದರು.

ವೇಣೂರಿನ ಬಾಹುಬಲಿ ಸಮುದಾಯ ಭವನದಲ್ಲಿ ನಡೆದ ಪರೀಕ್ಷೆ ಶಿಕ್ಷಣ ಮಾರ್ಗದರ್ಶನದಲ್ಲಿ ಮಾತಾಡುತ್ತಿದ್ದರು. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಕ್ಷಮತೆಯೂ ಬಹುಮುಖ್ಯ ಅಂಶ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಎಂಬ ಮೂರು ಪ್ರಮುಖ ಧಾರೆಗಳಲ್ಲಿ ಗುರುತಿಸುವ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬುದ್ದಿಮತ್ತೆ ಮತ್ತು ಆಸಕ್ತಿಯನುಸಾರ ವಿಪುಲ ಅವಕಾಶಗಳ ಹೆಬ್ಬಾಗಿಲು” ಎಂದರು.

ವೇದಿಕೆಯಲ್ಲಿ ಗಣ್ಯರಾದ ಶಿವರಾಮ ಹೆಗ್ಡೆ, ಭಾಸ್ಕರ ಪೈ, ಜಗದೀಶ ನಾಯಕ್, ಜಯರಾಮ ಶೆಟ್ಟಿ, ಹರೀಶ್ ಕುಮಾರ್, ಜಗದೀಶ್ಚಂದ್ರ ಡಿ. ಕೆ., ಎಲ್. ಜೆ. ಪೆರ್ನಾಂಡೀಸ್, ಸಂತೋಷ್ ರೇಗೊ, ಜಗದೀಶ್ ಚೌಟ, ಶಾಂತಿ ಪ್ರಸಾದ್ ಹೆಗ್ಡೆ, ಸುಂದರ ಹೆಗ್ಡೆ, ಎಚ್. ಮಹಮ್ಮದ್, ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಸುಭಾಷಿನಿ, ವಿಜಯ ಗೌಡ ಉಪಸ್ಥಿತರಿದ್ದರು.

ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಷಆಳ್ವಾಸ್ ಕಾಲೇಜಿನ. ಕನ್ನಡ ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಡಾ. ಮೋಹನ ಆಳ್ವ ಅವರನ್ನು‌‌ ನಾಗರೀಕರ ಪರವಾಗಿ ಸನ್ಮಾನಿಸಲಾಯಿತು. ಗುಣಪ್ರಸಾದ್ ಕಾರಂದೂರು ವಂದಿಸಿದರು.

LEAVE A REPLY

Please enter your comment!
Please enter your name here