ಬೆಳಾಲು: ಪಟ್ಲ ಯಕ್ಷ ಮಿತ್ರರು 2025 ವತಿಯಿಂದ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ‘ಅಯೋಧ್ಯಾ ದೀಪ’ ಎಂಬ ಯಕ್ಷಗಾನ ಬಯಲಾಟ ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.
ಸಾಧಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಗೌಡ ಪುಳಿತ್ತಡಿ, ಪ್ರಖರ ವಾಗ್ಮಿ ದಾಮೋದರ ಶರ್ಮ ಕಾರ್ಕಳ, ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ, ನಿವೃತ್ತ ಯೋಧ ರಮೇಶ್ ಕೊಂಕನೊಟ್ಟು, ಸ್ಥಳೀಯ ಯಕ್ಷಗಾನ ಕಲಾವಿದರಾದ ಪ್ರಸಾದ್ ಪಿ. ಟಿ., ಸಿದ್ದಪ್ಪ ಗೌಡ ಬೆಳಾಲು, ದಿನೇಶ್ ಮಾರ್ಪಲು, ಜನಾರ್ದನ ಪೂಜಾರಿ ಬೆಳಾಲು, ರವಿ ಪೂಜಾರಿ ಬೆಳಾಲು, ಪಾವಂಜೆ ಮೇಳದ ಭಾಗವತ ಸತೀಶ್ ಶೆಟ್ಟಿ ಪಟ್ಲ, ಮೆನೇಜರ್ ಮಾಧವ ಬಂಗೇರ ಕೊಳತ್ತಮಜಲುರವರನ್ನು ಸನ್ಮಾನಿಸಲಾಯಿತು.
ವೇದಿಕೆ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ನೋಟರಿ ವಕೀಲ ಶ್ರೀನಿವಾಸ ಗೌಡ, ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ. ಬೆಳಾಲು, ಶ್ಯಾಮರಾಯ ಆಚಾರ್ಯ, ಉಮೇಶ್ ಆಚಾರ್ಯ, ಸುಮಿತ್ ಆಚಾರ್ಯ, ಹರೀಶ್ ಆಚಾರ್ಯ ಉಪಸ್ಥಿತರಿದ್ದರು.
ಶಿವಕುಮಾರ್ ಬಾರಿತ್ತಾಯ ಪಾರಳ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.