ಜ. 26: ದೇರಾಜೆ ಬೆಟ್ಟ ವರ್ಷಾವಧಿ ನೇಮೋತ್ಸವ

0

ಬೆಳ್ತಂಗಡಿ: ಸುಮಾರು 800 ವರ್ಷ ಇತಿಹಾಸ ಇರುವ ಮರೋಡಿ ಗ್ರಾಮದ ದೇರಾಜೆ ಬೆಟ್ಟವು 250 ರಿಂದ 300 ಅಡಿ ಎತ್ತರದಲ್ಲಿದ್ದು, ಸುತ್ತಲೂ ಪ್ರಕೃತಿಯ ರಮಣೀಯ ದೃಶ್ಯ ಕಂಡು ಬರುತ್ತದೆ. ಇಲ್ಲಿನ ಗ್ರಾಮಸ್ಥರ ಅನೇಕ ಕೋರಿಕೆಗಳನ್ನು ಈಡೇರಿಸಿರುವ ಮರೋಡಿ ಗ್ರಾಮದ ದೇರಾಜೆ ಬೆಟ್ಟ ಶ್ರೀ ಕೊಡಮಣಿತ್ತಾಯ ಸಾನಿಧ್ಯಗಳ ವರ್ಷಾವಧಿ ನೇಮೋತ್ಸವ ಜ. 26 ರಂದು ನಡೆಯಲಿದೆ. ಬೆಳಗ್ಗೆ 9.45 ರ ಸಮಯಕ್ಕೆ ಮುಹೂರ್ತ ಕಂಬ ನಡೆದರೆ, ಸಂಜೆ 4 ಗಂಟೆಗೆ ಪಾಂಡಿಬೆಟ್ಟುಗುತ್ತು ಮನೆಯಿಂದ ಹಾಗೂ ಉಚ್ಚೂರು ಮನೆಯಿಂದ ಕೊಡಮಣಿತ್ತಾಯ ದೈವದ ಭಂಡಾರ ಭವ್ಯ ಮೆರವಣಿಗೆ ಜೊತೆ ಹೊರಡಲಿದೆ. ರಾತ್ರಿ 7 ರಿಂದ ದೈವದ ನೇಮೋತ್ಸವ ನಡೆದರೆ 9 ಗಂಟೆಗೆ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಲಿದೆ.

ಈ ಕ್ಷೇತ್ರದ ಸೇವೆಗೆ ಮುಸ್ಲಿಂ ಧರ್ಮಿಯರು ಕೂಡ ಬರುತ್ತಾರೆ. ನನಗೂ ಹಿಂದೆ ಈ ದೈವದ ಬಗ್ಗೆ ಇರಲಿಲ್ಲ. ಆದರೆ ನಾನು ಕ್ಷೇತ್ರದ ಕಮಿಟಿಗೆ ಸೇರಿದ ನಂತರ ನನಗೆ ಆದ ಅನುಭವವನ್ನು ಹೇಳಲು ಅಸಾಧ್ಯ. ಇಲ್ಲಿ ನೆನೆದು ಹೋದ ನಂತರ ನನ್ನ ಎಷ್ಟೋ ಕೆಲಸಗಳು ಕೂಡಿ ಬಂದಿವೆ, ಸಕ್ಸಸ್‌ ಆಗಿವೆ. – ನಾರಾಯಣ ಪೂಜಾರಿ, ಉಚ್ಚೂರು, ಆಡಳಿತ ಕಮಿಟಿ ಕಾರ್ಯದರ್ಶಿ.

“800 ವರ್ಷ ಇತಿಹಾಸ ಇರುವ ಕ್ಷೇತ್ರ ಇದು. ಅನೇಕ ವರ್ಷ ಅಜೀರ್ಣವಾಸ್ಥೆಯಲ್ಲಿತ್ತು. ಈ ಹಿಂದೆ 2 ನಾಗರಹಾವು ಓಡಾಡುತ್ತಿತ್ತು. ಅನೇಕ ಪವಾಡಗಳು ಇಲ್ಲಿ ನಡೆದಿದೆ. ಮದುವೆ ಆಗದವರು, ಮಕ್ಕಳಾಗದವರು ಇಲ್ಲಿ ಬಂದು ಹರಕೆ ಹೇಳಿ ಹೋಗಿದ್ದಾರೆ. ಎಲ್ಲರಿಗೂ ದೈವ ಕೃಪೆ ತೋರಿದೆ” – ಜಯವರ್ಮ ಬುಣ್ಣು ಕುಕ್ಕೆರಬೆಟ್ಟು, ಆಡಳಿತ ಸಮಿತಿ ಸದಸ್ಯರು.

LEAVE A REPLY

Please enter your comment!
Please enter your name here