ನಾವೂರು: ಶ್ರೀರಾಮೋತ್ಸವ ಕಾರ್ಯಕ್ರಮವು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜ. 22 ರಂದು ಸಂಜೆ ನಡೆಯಿತು.
ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆಗೊಂಡು ಆಲಯ ಲೋಕಾರ್ಪಣೆಯಾದ ಪುಣ್ಯದಿನದ ಮೊದಲ ಸಂಭ್ರಮಾಚರಣೆಯ ಪ್ರಯುಕ್ತ ದೇವಸ್ಥಾನದಲ್ಲಿ ದೀಪಾಲಂಕಾರ ಭಜನೆ ರಂಗ ಪೂಜೆ ಹಾಗೂ ಸಾಮೂಹಿಕ ರಾಮನಾಮ ಕಾರಕ ಮಂತ್ರ ಪಠಣ ನಡೆಯಿತು.
ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲ್ಯಾನ್, ಜಾತ್ರಾ ಸಮಿತಿ ಅಧ್ಯಕ್ಷ ಪ್ರದೀಪ್ ಎ., ಸುರೇಶ್ ಜಿ. ಹಾಗೂ ಅರ್ಚಕ ದಿನೇಶ್ ಭಟ್, ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.