ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ಮಾಹಿತಿ ಕಾರ್ಯಾಗಾರ

0

ಮುಂಡಾಜೆ: ಜ. 8 ರಂದು ಗ್ರಾಮ ಪಂಚಾಯಿತಿ ಹಾಗೂ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ ವಿಶೇಷ ಚೇತನ ವಾರ್ಷಿಕ ದಿನಾಚರಣೆ ಅಂಗವಾಗಿ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮನ್ವಯ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಸೌಲಭ್ಯ ಸವಲತ್ತು ವಿತರಣೆ ಮಾಡಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗಣೇಶ ಬಂಗೇರ ಉದ್ಘಾಟನೆ ನೆರವೇರಿಸಿದರು. ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಮಾ, ಅಶ್ವಿನಿ ಅರವಿಂದ ಹೆಬ್ಬಾರ್, ಪ್ರಹ್ಲಾದ್ ಪಡ್ಕ್ಕೆ, ಸೆಬಾಸ್ಟಿಯನ್ ವಿ. ಸಿ., ಅಬೂಬಕ್ಕರ್ ಶಿರ್ತಾಡಿ ಭಾಗವಹಿಸಿ ಮಾತನಾಡಿದರು.

ವಿಕಲಚೇತನರ ಪುನರವಸತಿ ಕಾರ್ಯ ವಿಭಾಗದ ಜೋಸೆಫ್ ಇಂದಬೆಟ್ಟು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಸ್ವಾಗತಿಸಿದರು. ಮುಂಡಾಜೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿರರು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾಹಿತಿಯನ್ನು ನೀಡಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಜೊತೆಗಿದ್ದರು. ಮುಂಡಾಜೆ ಗ್ರಾಮೀಣ ಪುನರ್ ವಸತಿ ಕಾರ್ಯ ವಿಭಾಗದ ವಿ. ಆರ್. ಡಬ್ಲ್ಯೂ ಮಜೀದ್ನೀಡಿಗಲ್ ಪ್ರಾಸ್ತಾವಿಕ ವರದಿ ಮಂಡಿಸಿದರು.

ಬೆಳ್ತಂಗಡಿ ತಾಲೂಕು ಪಂಚಾಯತ್ ನ ಜಯಾನಂದ ಲೈಲಾ ಕಾರ್ಯಕ್ರಮ ನಿರೂಪಿಸಿ ಸಹಕರಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಕಲ ಚೇತನ ಫಲಾನುಭವಿ ವಿದ್ಯಾರ್ಥಿಯರಿಗೇ ಗ್ರಾಮ ಪಂಚಾಯಿತಿ 5%ರ, ಅನುದಾನ ಶಿಕ್ಷಣಕ್ಕೆ ಸಹಾಯದ ಉದ್ದೇಶ ಚೆಕ್ ವಿತರಣೆ ಮಾಡಲಾಯಿತು. ಭಾಗವಹಿಸಿದ ಎಲ್ಲರಿಗೂ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಕಲ ಚೇತನರಿಗೆ ಮತ್ತು ತಂದೆ ತಾಯಿ ಮರಣದ ಮಕ್ಕಳಿಗೆ ಸೆಬಾಸ್ಟಿಯನ್ ಮುಂಡಾಜೆ ನೀಡಲಾದ ಸ್ಕೂಲ್ ಬ್ಯಾಗ್, ಬಟ್ಟೆ, ವಸ್ತುಗಳನ್ನು ವಿತರಿಸಲಾಯಿತು.

72 ಫಲಾನುಭವಿಗಳಿಗೆ ನೀಡಿದ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಭಾಗವಹಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ, ಬೆಳಗಿನ ಉಪಹಾರ ನೀಡಲಾಯಿತು.

ಸಹಕರಿಸಿದ ಸಂಘ ಸಂಸ್ಥೆಗಳ ದಾನಿಗಳ ನೆರವಿನಿಂದ ಸೌಲಭ್ಯ ಸವಲತ್ತು ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯತ್ ಮುಂಡಾಜೆ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಸಂಘ ಉಜಿರೆ
ಮುಂಡಾಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಾಮ್ ದೇವ್ ರಾವ್, ಯಂಗ್ ಚಾಲೆಂಜರ್ಸ್ ಮುಂಡಾಜೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಡಾಜೆ, ಸಾಬ್ಸ್ಟಿಯನ್ ಮುಂಡಾಜೆ, ಪ್ರಹ್ಲಾದ್ಪಡ್ಕ ಸಂಚಾಲಕರು ಅನಂತ್ ಪ್ಪಡಿಕೆ ಟ್ರಸ್ಟ್ ಮುಂಡಾಜೆ, ಗೀತಾ ಗೋಖಲೆ ಅಶ್ವಿನಿ ಕ್ಲಿನಿಕ್ ಮುಂಡಾಜೆ, ಅಶ್ವಿನಿ ಅರವಿಂದ ಹೆಬ್ಬಾರ್ ಮಾಜಿ ಸದಸ್ಯರು ಗ್ರಾಮ ಪಂಚಾಯಿತಿ ಮುಂಡಾಜೆ, ಹಾಲಿ ನಿರ್ದೇಶಕರು ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ, ನಾರಾಯಣ ಗೌಡ ಕೊಳಂಬೆ ಪಂಚ ಶ್ರಿ ಮುಂಡಾಜೆ, ಪ್ರಖ್ಯಾತ ಶೆಟ್ಟಿ ಚಿಕನ್ ಸೆಂಟರ್ ಸೋಮಂತಾಡ್ಕ, ಶಿವಾನಂದ ಪ್ರಭು, ಮೀರ್ಷಾದ್ ಶಾ ಕಲ್ಮಂಜ ಉಜಿರೆ, ರಾಮಣ್ಣ ಶೆಟ್ಟಿ ಅಗರಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರು ಗ್ರಾಮ ಪಂಚಾಯಿತಿ ಮುಂಡಾಜೆ, ಸುನಿಲ್ ಬೀಡೆ, ಸುಜಿತ್ ಬೀಡೆ, ಸಚಿನ್ ಬೀಡೆ, ಜಾಲಿ ಪ್ರಾಂಶುಪಾಲರು ವಿವೇಕಾನಂದ ಕಾಲೇಜು ಮುಂಡಾಜೆ, ಸಿದ್ದೀಕ್ ಮಲಬಾರ್ ಸ್ಟೂರ್, ವೇದನಂದ ಲಕ್ಷ್ಮಿ ಟೂ ವೀಲರ್ ಸೋಮಂತಡ್ಕ, ಮಹಮ್ಮದ್ ಮುಜೀಬ್ ಸುಪ್ರಿಯಾ ಉುಡ್ ಮಿಲ್ ಕಲ್ಮಂಜ, ಗೋಪಾಲ್ ನಾಯ್ಕ ನಿವೃತ ಅಂಚೆ ಕಚೇರಿ ಪಾಲಕರು ಸೋಮಂತಡ್ಕ, ಗಿರಿಯಪ್ಪ ಗೌಡ ಕಾರ್ಯಾದರ್ಶಿಗಳು ಇಂದಬೆಟ್ಟು, ಅಬೂಬಕ್ಕರ್ ಶಿರ್ತಾಡಿ ಉದ್ಯಮಿಗಳು ಮುಂಡಾಜೆ, ಹೊನ್ನಪ್ಪ ಪೂಜಾರಿ ದೇವಸ್ಯ, ಗಣೇಶ್ ಶೆಟ್ಟಿ ಶಿವ ಕೃಪ ಸೋಮಂತಡ್ಕ, ನಾರಾಯಣ ಗೌಡ ದೇವಸ್ಯ ಮಾಜಿ ಸದಸ್ಯರು ಗ್ರಾಮ ಪಂಚಾಯಿತಿ ಮುಂಡಾಜೆ, ಜಯಂತ್ ರಾವ್ ಕಲ್ಮಂಜ.

ಉಪಹಾರ ವ್ಯವಸ್ಥೆ ಬೆಳಗಿನ ಉಪಹಾರಕ್ಕೆ ಪುಷ್ಪರಾಜ್ ರಬ್ಬರ್ ಬೆಳೆಗಾರರ ಸಂಘ ಸಿಬ್ಬಂದಿ ಮುಂಡಾಜೆ, ಪರ್ಲ್ಯಾನಿ ಇಬ್ರಾಹಿಂ ಮುಂಡಾಜೆ, ರಫೀಕ್ ಅರೆಕಲ್ ಮುಂಡಾಜೆ, ಪುಷ್ಪರಾಜ್ ಶೆಟ್ಟಿ ಸೋಮಂತಡ್ಕ, ಸಿರಾಜ್, ಅಹಮದ್ ಇಜಾಸ್, ರಾಜೇಶ್ ಶೆಟ್ಟಿ, ಶ್ರೀಕಾಂತ್, ಹರಿ ಪ್ರಸಾದ್, ಹುಸೈನ್ ಮೋಬೈಲ್ ಶಾಪ್, ಮತ್ತಿತರರ ಸಹಕಾರದೊಂದಿಗೆ ವಿಶೇಷ ಚೇತನ ವಾರ್ಷಿಕ ಕಾರ್ಯಕ್ರಮ 16 ವರ್ಷ ನಡೆಸಲಾಯಿತು. ಗಾಯತ್ರಿ ಪಿ. ವಂದಿಸಿದರು.

LEAVE A REPLY

Please enter your comment!
Please enter your name here