

ಮೊಗ್ರು: ಮೂವರು ದೈವಗಳ ದೈವಸ್ಥಾನ, ಮುಗೇರಡ್ಕ ಬೆಳ್ತಂಗಡಿ ತಾಲೂಕು, ವಾರ್ಷಿಕ ನೇಮೋತ್ಸವ ಜ. 18 ರಿಂದ 23 ರವರೆಗೆ ನಡೆಯಲಿದೆ.

ಜ. 22 ರಂದು ಬೆಳಿಗ್ಗೆ 9ಕ್ಕೆ ಬಬ್ಬರಿ ಗುಡ್ಡೆಯಲ್ಲಿ ದೈವಂಕ್ಕು ಪರ್ವ, ಸಂಜೆ 5-30ಕ್ಕೆ ದೈವಸ್ಥಾನದಲ್ಲಿ ತೋರಣ ಮುಹೂರ್ತ, ರಾತ್ರಿ 11ಕ್ಕೆ ದೈವಗಳ ಭಂಡಾರ ಕ್ಷೇತ್ರಕ್ಕೆ ಆಗಮನ, ರಾತ್ರಿ 12-00ಕ್ಕೆ ಶುದ್ಧಕಲಶ ಮತ್ತು ಹೊಸ ಹುಲಿಬಂಡಿ ದೈವಕ್ಕೆ ಒಪ್ಪಿಸುವಿಕೆ, ರಾತ್ರಿ 1 ರಿಂದ 5 ರವರೆಗೆ ಪರಿವಾರ ದೈವಗಳ ನೇಮೋತ್ಸವ ಆರಂಭ (ದೈವ೦ಕುಳು, ಬಿರ್ಮೆರ್, ಗಿಳಿರಾಮ, ಕುಮಾರ, ಬಸ್ತಿನಾಯ್ಕ ಇನ್ನಿತರ ದೈವಗಳು).
ಜ. 23 ರಂದು ಬೆಳಿಗ್ಗೆ ಗಂಟೆ 8 ರಿಂದ ಕಲ್ಕುಡ, ಪಿಲಿಚಾಮುಂಡಿ ದೈವದ ಗಗ್ಗರ, ನರ್ತನ ಸೇವೆ ಆರಂಭ, ಬೆಳಿಗ್ಗೆ ಗಂಟೆ 10 ರಿಂದ ಶಿರಾಡಿ ದೈವದ ಗಗ್ಗರ, ನರ್ತನ ಸೇವೆ ಆರಂಭ, ಮಧ್ಯಾಹ್ನ 12 ರಿಂದ ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ 2-30ಕ್ಕೆ ಶಿರಾಡಿ ದೈವದ ಹುಲಿ ಸವಾರಿ, ಸಂಜೆ 7 ಕ್ಕೆ ಬಸ್ತಿ ನಾಯ್ಕ ದೈವದ ನರ್ತನ ಸೇವೆ ಆರಂಭ. ರಾತ್ರಿ 10ಕ್ಕೆ ದೈವದ ಭಂಡಾರ ಕ್ಷೇತ್ರದಿಂದ ಭಂಡಾರ ಮನೆಗೆ ನಿರ್ಗಮನ.