

ಲಾಯಿಲ: ಗ್ರಾಮ ಪಂಚಾಯತ್ ವತಿಯಿಂದ ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ ಹಾಗೂ ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ಪಡ್ಲಾಡಿ ಇಲ್ಲಿಯ ಮಕ್ಕಳಿಗೆ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸುಮಾರು 1,20,000 ಮೊತ್ತದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ ಕೆ, ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ, ಸದಸ್ಯರಾದ ರಜನಿ, ಜಯಂತಿ, ಆಶಾಲತಾ, ಮರಿಯಮ್ಮ, ಸಾರಮ್ಮ, ದಿನೇಶ ಶೆಟ್ಟಿ, ಪ್ರಸಾದ್ ಶೆಟ್ಟಿ, ಮಹೇಶ್ ಕೆ, ಗಣೇಶ್, ಅರವಿಂದ ಕುಮಾರ್, ಹರಿಕೃಷ್ಣ, ಚಿದಾನಂದ ಶೆಟ್ಟಿ, ಹರೀಶ್ ಕುಲಾಲ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ ಪಿ, ಕಾರ್ಯದರ್ಶಿ ತಾರಾನಾಥ ಕೆ, ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಜರಿದ್ದರು.