ಹೊಸಂಗಡಿ: ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹೃದಯಾಘಾತದಿಂದ ನಿಧನರಾದ ಹರಿಪ್ರಸಾದ್ ರ ಗುರುದೇವ ಫಾರ್ಮ್ಸ್ ಗೆ ವಿಧಾನ ಸಭಾ ಸಭಾಪತಿ ಯು. ಟಿ. ಖಾದರ್ ಜ. 15 ರಂದು ಭೇಟಿ ನೀಡಿ ದಿ. ಹರಿಪ್ರಸಾದ್ ಪತ್ನಿ ರಶ್ಮಿಯವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ನಿವೃತ್ತ ಸಹಾಯಕ ಕಮಿಷನರ್ ಅಚ್ಚುತ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ. ಪೆರಿಂಜೆ, ಗ್ರಾ. ಪಂ ಮಾಜಿ ಉಪಾಧ್ಯಕ್ಷ ಪದ್ಮರಾಜ್ ಪೇರಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.