ವೇಣೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ. ಶಾಖೆಯಲ್ಲಿರುವ ಖುಷಿ ನವೋದಯ ಸ್ವಸಹಾಯ ಸಂಘದ ಸದಸ್ಯೆ ಪ್ರೀತಾ ಪ್ರವೀತಾ ಡಿಸೋಜ ಹಾಗೂ ವೇಣೂರು ಮಹಾದೇವಿ ನವೋದಯ ಸ್ವಸಹಾಯ ಸಂಘದ ಸದಸ್ಯೆ ನಾಗಶ್ರೀ ರವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನಿಂದ ಮಂಜೂರಾದ ಚೈತನ್ಯ ವಿಮಾ ಒಟ್ಟು ಮೊತ್ತ ರೂ.16,000/ ಚೆಕ್ ನ್ನು ಶಾಖೆಯ ಪ್ರಧಾನ ಕಛೇರಿಯ ಶಾಖಾ ನಿರೀಕ್ಷಕ ಸಂದೀಪ್ ಹಾಗೂ ಸುಬ್ರಹ್ಮಣ್ಯ ಹಸ್ತಾಂತರಿಸಿದರು. ಪ್ರೇರಕಿ ಆಶಾಲತಾ ಹಾಗೂ ಶಾಖಾ ಸಿಬ್ಬಂದಿ ನೀತಾ, ಅಜಿತ್, ಭಾರತಿ ಉಪಸ್ಥಿತರಿದ್ದರು.