ಉಜಿರೆ: ಮಧ್ಯಪ್ರದೇಶದ ಭೂಪಾಲ್ ನ ರವೀಂದ್ರ ಭವನದಲ್ಲಿ ಜ. 3 ರಿಂದ 6 ರವರೆಗೆ ನಡೆದಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ)ಯ ವಿದ್ಯಾರ್ಥಿಯಾದ 10ನೇ ತರಗತಿಯ ಅಧಿಶ್ ಬಿ. ಸಿ. ಹಿರಿಯ ವಿಭಾಗದಲ್ಲಿ ಭಾಗವಹಿಸಿ ” ವ್ಯಾಲ್ಯೂ ಎಡಿಶನ್ ಫಾರ್ ಅಗ್ರಿಕಲ್ಚರ್ ವೇಸ್ಟ್ ಅಂಡ್ ವೀಡ್ಸ್ ” ಎಂಬ ವಿಜ್ಞಾನದ ಸಂಶೋಧನೆಯನ್ನು ಮಂಡಿಸಿದ್ದಾರೆ.
ಕಿರಿಯ ವಿಭಾಗದಲ್ಲಿ 9ನೇ ತರಗತಿಯ ಸಚಿತ್ ಭಟ್ ಭಾಗವಹಿಸಿ ” ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ಸ್ ಫ್ರಮ್ ಅನ್ಯೂಸ್ಡ್ ಬನಾನಾ ಫೈಬರ್ಸ್” ಎಂಬ ಸಂಶೋಧನೆಯನ್ನು ಮಂಡಿಸಿರುತ್ತಾರೆ. ವಿದ್ಯಾರ್ಥಿಗಳು ಸಂಶೋಧನೆಯು ಅತ್ಯುತ್ತಮ ಸಂಶೋಧನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳು ತಮ್ಮ ಸಹವರ್ತಿಗಳಾದ 10ನೇ ತರಗತಿಯ ಆಲಾಪ್ ಎಂ. ಮತ್ತು 9ನೇ ತರಗತಿಯ ಸುಜನ್ ಗೌಡ ರೊಂದಿಗೆ ಜೊತೆಯಾಗಿ ಸಂಶೋಧನೆಯನ್ನು ನಡೆಸಿರುತ್ತಾರೆ.
ಈ ಸಂಶೋಧನೆಗಳಿಗೆ ಮಾರ್ಗದರ್ಶಿ ಶಿಕ್ಷಕಿ ಧನ್ಯವತಿ ಕೆ. ಮತ್ತು ಶೋಭಾ ಎಸ್. ಕಾರ್ಯನಿರ್ವಹಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕ ವೃಂದದವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.