p>
ನೆರಿಯ: ಕಾಡಾನೆ ಪ್ರತ್ಯಕ್ಷಗೊಂಡು ಜನರು ಭಯಭೀತರಾದ ಘಟನೆ ಜ. 13 ರಂದು ನಡೆದಿದೆ. ಕಾಡಾನೆ ಉಂಜಾಜೆಯಿಂದ ಅಪ್ಪೆಲ ದೇವಸ್ಥಾನದ ಸಮೀಪದ ಪರಪ್ಪು ಮೂಲಕ ಬಯಲು ಬೋವಿನಡಿ ನಿವಾಸಿ ಆನಂದ ಪೂಜಾರಿ ಮನೆ ಅಂಗಳಕ್ಕೆ ಪ್ರವೇಶಿಸಿ ಮನೆ ಮಂದಿಗೆ ಅತಂಕ ಸೃಷ್ಟಿ ಮಾಡಿತ್ತು. ಹಾಗೂ ಹಲವರ ತೋಟ ಹಾನಿ ಮಾಡಿದೆ ಎನ್ನಲಾಗಿದೆ. ಕಳೆದ ವರ್ಷ ಆನೆ ಕಾರಿನ ಮೇಲೆ ದಾಳಿ ಮಾಡಿದ ಘಟನೆ ನೆನೆದು ಜನರು ಭಯಭೀತರಾಗಿದ್ದರೆ.